ಸ್ಪೇನ್: ಒಂದೇ ದಿನದಲ್ಲಿ 100ಕ್ಕೂ ಅಧಿಕ ಸಾವು

Update: 2020-03-16 18:04 GMT

ಮ್ಯಾಡ್ರಿಡ್ (ಸ್ಪೇನ್), ಮಾ. 16: ಸ್ಪೇನ್‌ನಲ್ಲಿ ಕೊರೋನವೈರಸ್‌ನಿಂದಾಗಿ ಕಳೆದ 24 ಗಂಟೆಗಳ ಅವಧಿಯಲ್ಲಿ 100ಕ್ಕೂ ಅಧಿಕ ಸಾವುಗಳು ಸಂಭವಿಸಿವೆ ಎಂದು ಆ ದೇಶ ರವಿವಾರ ತಿಳಿಸಿದೆ. ಇದೇ ಅವಧಿಯಲ್ಲಿ 2,000ಕ್ಕೂ ಅಧಿಕ ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ.

ಇಟಲಿ ಬಳಿಕ ಕೊರೋನವೈರಸ್ ಅತಿ ಹೆಚ್ಚಿನ ಹಾನಿಯನ್ನು ಸ್ಪೇನ್‌ನಲ್ಲಿ ಮಾಡಿದೆ.

ಇದರೊಂದಿಗೆ ಸ್ಪೇನ್‌ನಲ್ಲಿ ಕೋವಿಡ್-19 ಸೋಂಕಿತರ ಒಟ್ಟು ಸಂಖ್ಯೆ 7,753ಕ್ಕೆ ಹಾಗೂ ಒಟ್ಟು ಸಾವಿನ ಸಂಖ್ಯೆ 288ಕ್ಕೆ ಏರಿದೆ.

ಸ್ಪೇನ್‌ಗೆ ಬಹುತೇಕ ಸಂಪೂರ್ಣ ಬೀಗಮುದ್ರೆ ಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News