ಚೀನಾ: ಶಾಲಾ, ಕಾಲೇಜುಗಳು ಆರಂಭ

Update: 2020-03-16 18:06 GMT

ಬೀಜಿಂಗ್, ಮಾ. 16: ಚೀನಾದಲ್ಲಿ ಕೊರೋನವೈರಸ್ ಸಾಂಕ್ರಾಮಿಕದ ತೀವ್ರತೆ ಕಡಿಮೆಯಾಗುತ್ತಿರುವಂತೆಯೇ, ಶಾಲೆಗಳು ಮತ್ತು ಕಾಲೇಜುಗಳು ಪುನರಾರಂಭಗೊಳ್ಳುವ ಹಂತದಲ್ಲಿವೆ. ಆದರೆ, ಹೆಚ್ಚಿನ ಜನರಲ್ಲಿ ಇರುವ ಪ್ರಶ್ನೆಯೆಂದರೆ: ಮಕ್ಕಳು ಮತ್ತು ತರುಣರು ಶಾಲೆ ಮತ್ತು ಕಾಲೇಜುಗಳಿಗೆ ಮರಳಿದಾಗ ಏನಾಗುತ್ತದೆ? ಮಕ್ಕಳು ಭಾರೀ ಸಂಖ್ಯೆಯಲ್ಲಿ ಒಟ್ಟು ಸೇರಿದಾಗ ಸೋಂಕು ಮತ್ತೆ ಹರಡುತ್ತದೆಯೇ?

ಆದರೆ, ಇದಕ್ಕೆ ಉತ್ತರ ಯಾರಿಗೂ ಗೊತ್ತಿಲ್ಲ. ಯಾಕೆಂದರೆ ಚೀನಾದಲ್ಲಿ ಬೃಹತ್ ಪ್ರಮಾಣದಲ್ಲಿ ಕೊರೋನವೈರಸ್ ಸೋಂಕು ಹರಡಲು ಆರಂಭಿಸಿದಾಗ ಅಲ್ಲಿನ ಶಾಲೆಗಳನ್ನು ಅದಾಗಲೇ ಮುಚ್ಚಲಾಗಿತ್ತು.

ಈಗಾಗಲೇ ಕ್ಸಿನ್‌ಜಿಯಾಂಗ್ ಮತ್ತು ಕಿಂಘಾಯಿ ಪ್ರಾಂತಗಳು ಮತ್ತು ನೈರುತ್ಯ ಚೀನಾದ ಗುಯಿಝೂ ಪ್ರಾಂತದಲ್ಲಿ ಶಾಲಾ, ಕಾಲೇಜುಗಳು ಆರಂಭಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News