ಬೆಳ್ತಂಗಡಿ: ನಾರಾವಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Update: 2020-03-17 14:39 GMT

ಬೆಳ್ತಂಗಡಿ : ತಾಲೂಕಿನ ನಾರಾವಿವ ಗ್ರಾಮದಲ್ಲಿ ಇಂದು ಸಂಜೆ ಗುಡುಗು ಸಹಿತ ಭಾರೀ ಮಳೆ ಸುರಿದಿದೆ.

ನಾರಾವಿ ನೂಜೋಡಿ ನಿವಾಸಿ ರವಿ ಎಂಬವರ ಮನೆಗೆ ಸಿಡಿಲು ಬಡಿದು ಅವರ ಪತ್ನಿ ಸುಪ್ರೀತ ಗಾಯಗೊಂಡಿದ್ದಾರೆ. ಮನೆಯ ಮೀಟರ್ ಬೋರ್ಡಿನ ಹತ್ತಿರ ಅವರು ನಿಂತಿದ್ದ ವೇಳೆ ಸಿಡಿಲು ಬಡಿದಿದ್ದು ಅವರಿಗೆ ಸುಟ್ಟ ಗಾಯಗಳಾಗಿವೆ. ಮನೆಯಲ್ಲಿ ಅವರ ಮೂವರು ಮಕ್ಕಳಿದ್ದರು. ಅವರಿಗೆ ನಾರಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಸಿಡಿಲಿನ ಹೊಡೆತಕ್ಕೆ ಮನೆಯ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದ್ದು, ಗೋಡೆ ಬಿರುಕು ಬಿಟ್ಟಿದೆ ಎಂದು ದೂರಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News