ಮಾ. 27: ಕೊರೋನ ಭಯ ನಿವಾರಣೆಗೆ ಶ್ರೀಕೃಷ್ಣ ಮಠದಲ್ಲಿ ಧನ್ವಂತರಿ ಯಾಗ
Update: 2020-03-17 20:00 IST
ಉಡುಪಿ, ಮಾ.17: ಪ್ರಕೃತ ಸಮಾಜದಲ್ಲಿರುವ ರೋಗಗಳ ಪರಿಹಾರಕ್ಕಾಗಿ ಹಾಗೂ ರೋಗರುಜಿನಗಳ ಕುರಿತ ಭಯ ನಿವಾರಣೆಗಾಗಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀಅದಮಾರು ಮಠದ ವತಿಯಿಂದ ಮಾ.27ರ ಶುಕ್ರವಾರ ‘ಲಕ್ಷ ಧನ್ವಂತರಿ ಮಂತ್ರಜಪ ಪೂರ್ವಕ ಧನ್ವಂತರಿ ಯಾಗ’ ಹಾಗೂ ಸಾರ್ವಜನಿಕ ಪ್ರಾರ್ಥನೆ ನಡೆಯಲಿದೆ.
ಮಾ.27ರ ಬೆಳಗ್ಗೆ 8 ಗಂಟೆಗೆ ಯಾಗ ಪೂರ್ಣಾಹುತಿ ಆಗಲಿದ್ದು, ಸಾರ್ವಜನಿಕರು ಇದರಲ್ಲಿ ಭಾಗವಹಿಸುವಂತೆ ಪರ್ಯಾಯ ಅದಮಾರು ಮಠದ ದಿವಾನರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.