ಕೊರೋನ ವೈರಸ್ ಭೀತಿ: ದೇಶಾದ್ಯಂತ ಬೀಗಮುದ್ರೆ ಘೋಷಿಸಿದ ಫ್ರಾನ್ಸ್ ಅಧ್ಯಕ್ಷ

Update: 2020-03-17 14:37 GMT

ಝೂರಿಕ್ (ಸ್ವಿಟ್ಸರ್‌ಲ್ಯಾಂಡ್), ಮಾ. 17: ವೇಗವಾಗಿ ಹರಡುತ್ತಿರುವ ನೋವೆಲ್-ಕೊರೋನವೈರಸ್ ಸೋಂಕನ್ನು ತಡೆಯುವುದಕ್ಕಾಗಿ ಮನೆಯಲ್ಲೇ ಉಳಿಯುವಂತೆ ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಸೋಮವಾರ ಜನರಿಗೆ ಆದೇಶಿಸಿದ್ದಾರೆ. ಅಗತ್ಯ ಪ್ರಯಾಣಗಳಿಗೆ ಅನುಮತಿ ನೀಡಲಾಗುವುದು ಹಾಗೂ ಆದೇಶವನ್ನು ಉಲ್ಲಂಘಿಸಿದವರನ್ನು ಶಿಕ್ಷಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಫ್ರಾನ್ಸ್‌ನಲ್ಲಿ ಕೊರೋನವೈರಸ್‌ನಿಂದಾಗಿ 21 ಸಾವುಗಳು ಹಾಗೂ 1,210 ಹೊಸ ಸೋಂಕು ಪ್ರಕರಣಗಳು ವರದಿಯಾದ ಬಳಿಕ ಮ್ಯಾಕ್ರೋನ್ ಈ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಫ್ರಾನ್ಸ್‌ನಲ್ಲಿ ಕೊರೋನವೈರಸ್‌ನಿಂದಾಗಿ ಮೃತಪಟ್ಟವರ ಒಟ್ಟು ಸಂಖ್ಯೆ 148ಕ್ಕೆ ಏರಿದೆ.

ಕನಿಷ್ಠ ಮುಂದಿನ 15 ದಿನಗಳಲ್ಲಿ ಫ್ರೆಂಚರು ತಮ್ಮ ಚಲನವಲನಗಳನ್ನು ತೀವ್ರವಾಗಿ ನಿಯಂತ್ರಿಸಬೇಕು ಹಾಗೂ ತಮ್ಮ ಸಾಮಾಜಿಕ ಸಂಪರ್ಕಗಳನ್ನು ಎಷ್ಟು ಸಾಧ್ಯವೋ ಅಷ್ಟು ಸೀಮಿತಗೊಳಿಸಬೇಕು ಎಂದು ದೇಶವನ್ನುದ್ದೇಶಿಸಿ ಮಾಡಿದ 20 ನಿಮಿಷಗಳ ಭಾಷಣದಲ್ಲಿ ಫ್ರಾನ್ಸ್ ಅಧ್ಯಕ್ಷರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News