ಚೇತನಾ ಆಚಾರ್ಯಗೆ ಡಾಕ್ಟರೇಟ್
ಉಡುಪಿ, ಮಾ.17: ಪ್ರಸಿದ್ಧ ಸಂಗೀತ ವಿದುಷಿ ಚೇತಾನಾ ಆಚಾರ್ಯ ಉಡುಪಿ ಇವರಿಗೆ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಚೇತನಾ ಆಚಾರ್ಯ ಇವರು ಜೈನ್ ವಿಶ್ವವಿದ್ಯಾಲಯದ ಡಾ.ಮೀರಾ ರಾಜಾರಾಮ್ ಪ್ರಾಣೇಶ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಭಕ್ತಿ ಸಂಗೀತದ ಅಗ್ರಪೀಠ-ಉಡುಪಿ ಕ್ಷೇತ್ರ (14ರಿಂದ 19ನೇ ಶತಮಾನ) ಎನ್ನುವ ಪ್ರೌಢ ಮಹಾಪ್ರಬಂಧಕ್ಕೆ ಜೈನ್ ವಿಶ್ವವಿದ್ಯಾಲಯವು ಪಿಹೆಚ್‌ಡಿ ಪದವಿಯನ್ನು ನೀಡಿದೆ.
ನಾವೂರು ಸುಬ್ರಹ್ಮಣ್ಯ ಆಚಾರ್ಯ, ಲಕ್ಷೀ ಆಚಾರ್ಯ ದಂಪತಿಯ ಪುತ್ರಿಯಾದ ಚೇತನಾ ಆಚಾರ್ಯ, ಸಂಗೀತದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪೂರೈಸಿ ನಂತರ ಪಿಹೆಚ್‌ಡಿ ಪದವಿಗಾಗಿ ಜೈನ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿದ್ದರು.
ಸಂಗೀತ ಕ್ಷೇತ್ರದಲ್ಲಿ ಆಕಾಶವಾಣಿಯ ಎ ಗ್ರೇಡ್ ಕಲಾವಿದೆ ಹಾಗೂ ಚಿತ್ರರಂಗದ ಹಿನ್ನೆಲೆ ಗಾಯಕಿಯಾಗಿ ಪ್ರಸಿದ್ಧರಾಗಿರುವ ಚೇತನಾ ಆಚಾರ್ಯ, ಪ್ರಸ್ತುತ ತಮ್ಮ ‘ಗಾಂಧರ್ವಮ್ ಸಂಗೀತ ವಿದ್ಯಾಲಯ ಉಡುಪಿ’ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವನ್ನು ನೀಡುತಿದ್ದಾರೆ.