×
Ad

ಕೊರೋನವೈರಸ್ ಬೀಗಮುದ್ರೆಗೆ ಬೆದರಿ ಬ್ರೆಝಿಲ್ ಜೈಲುಗಳಿಂದ ಕೈದಿಗಳು ಪರಾರಿ

Update: 2020-03-17 20:28 IST
ಸಾಂದರ್ಭಿಕ ಚಿತ್ರ

ರಿಯೋ ಡಿ ಜನೈರೊ (ಬ್ರೆಝಿಲ್), ಮಾ. 17: ಬ್ರೆಝಿಲ್‌ನ ನಾಲ್ಕು ಜೈಲುಗಳಿಂದ ಸೋಮವಾರ ನೂರಾರು ಕೈದಿಗಳು ತಪ್ಪಿಸಿಕೊಂಡಿದ್ದಾರೆ. ಕೊರೋನವೈರಸ್ ಹಿನ್ನೆಲೆಯಲ್ಲಿ, ಹಗಲು ಹೊತ್ತಿನಲ್ಲಿ ಸ್ವತಂತ್ರರಾಗುವ ಸೌಲಭ್ಯವು ರದ್ದಾಗಲಿದ್ದ ಒಂದು ದಿನದ ಮೊದಲು ಈ ಘಟನೆ ಸಂಭವಿಸಿದೆ.

‘‘ಎಷ್ಟು ಕೈದಿಗಳು ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ತಪ್ಪಿಸಿಕೊಂಡವರ ವಿವರಗಳನ್ನು ಈಗಲೂ ಪಡೆಯಲಾಗುತ್ತಿದೆ’’ ಎಂದು ಸಾವೊ ಪೌಲೊ ಸರಕಾರಿ ಕಾರಾಗೃಹ ಪ್ರಾಧಿಕಾರ ಹೇಳಿದೆ.

ಮೊಂಗಾಗುವ, ಟ್ರೆಮೆಂಬೆ, ಪೋರ್ಟೊ ಫೆಲಿಝ್ ಮತ್ತು ಮಿರಾಂಡೊಪೊಲಿಸ್ ಎಂಬ ನಾಲ್ಕು ಜೈಲುಗಳಿಂದ 1,000ದಷ್ಟು ಕೈದಿಗಳು ಪರಾರಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕೊರೋನವೈರಸ್ ಹರಡದಂತೆ ಹೇರಲಾಗಿರುವ ಬೀಗಮುದ್ರೆಗೆ ಬೆದರಿ ಕೈದಿಗಳು ಪಲಾಯನಗೈದಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News