ಮರವೂರು ಡ್ಯಾಂನಲ್ಲಿ ನೀರುಪಾಲಾದ ಇಂಜಿನಿಯರ್
Update: 2020-03-17 21:05 IST
ಮಂಗಳೂರು, ಮಾ.17: ಬಜ್ಪೆಯ ಸಮೀಪದ ಮರವೂರು ಡ್ಯಾಂ ಬಳಿ ಈಜಾಡುತ್ತಿದ್ದ ಇಂಜಿನಿಯರ್‌ವೊಬ್ಬರು ಆಕಸ್ಮಿಕವಾಗಿ ನೀರುಪಾಲಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಕಾವೂರು ನಿವಾಸಿ ಪ್ರಶಾಂತ್ ಶೆಟ್ಟಿ (45) ನೀರುಪಾಲಾದವರು. ಇವರು ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಕಳೆದ ನಾಲ್ಕು ತಿಂಗಳಿಂದ ಮಂಗಳೂರಿನ ಮಂಗಳಾ ಸ್ಟೇಡಿಯಂ ಈಜುಕೊಳದಲ್ಲಿ ಈಜುತ್ತಿದ್ದ ಇವರು, ಇತ್ತೀಚೆಗೆ ಕರೋನಾ ಭೀತಿಯಿಂದ ಈಜುಕೊಳ ಮುಚ್ಚಲ್ಪಟ್ಟಿದ್ದು, ಕೆಲವು ದಿನಗಳಿಂದ ಬೆಳಗ್ಗೆ ಮರವೂರು ಡ್ಯಾಂ ಬಳಿ ಈಜುತ್ತಿದ್ದರು. ಹಗ್ಗದ ರಕ್ಷಣೆಯಲ್ಲಿ ಈಜುತ್ತಿದ್ದ ಇವರು, ಆಕಸ್ಮಿಕವೆಂಬಂತೆ ನದಿಯ ಆಳ ನೀರಿಗೆ ಬಿದ್ದು, ಕೊನೆಯುಸಿರೆಳೆದಿದ್ದಾರೆ.
ಸುರತ್ಕಲ್‌ನ ಸಂಸ್ಥೆಯೊಂದರಲ್ಲಿ ಪಾಲುದಾರರಾಗಿದ್ದ ಇವರು, ಉತ್ಸಾಹಿ ಇಂಜಿನಿಯರ್‌ಆಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.