ನಾಡ: ತೆರಿಗೆ ಏರಿಕೆ ವಿರೋಧಿಸಿ ಸಿಪಿಎಂ ಮನವಿ
Update: 2020-03-17 21:14 IST
ಬೈಂದೂರು, ಮಾ.17: ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಡ, ಹಡವು, ಬಡಾಕೆರೆ ಮತ್ತು ಸೇನಾಪುರ ಗ್ರಾಮಗಳ ಸ್ಥಳೀಯ ನಿವಾಸಿಗಳ ಮನೆ ಕಟ್ಟಡ ತೆರಿಗೆಯನ್ನು ಗ್ರಾಪಂ ಏಕಪಕ್ಷೀಯವಾಗಿ ವಿಪರೀತ ಹೆಚ್ಚಳ ಮಾಡಿರುವು ದನ್ನು ಪುನರ್ ಪರಿಶೀಲಿಸಿ ಇಳಿಕೆ ಮಾಡುವಂತೆ ಒತ್ತಾಯಿಸಿ ಸಿಪಿಐ(ಎಂ) ಪಕ್ಷ ಸೋವುವಾರ ಗ್ರಾಪಂಗೆ ಮನವಿ ಸಲ್ಲಿಸಿತು.
ಮನವಿ ಸ್ವೀಕರಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಮೊಗವೀರ, ಮನೆ ತೆರಿಗೆ ತಾರತಮ್ಯದ ಬಗ್ಗೆ ಮನೆ,ಮನೆ ಭೇಟಿ ಮಾಡಿ ಪುನರ್ ಸಮೀಕ್ಷೆ ಮಾಡುವುದಾಗಿ ಭರವಸೆ ನೀಡಿದರು.
ಸಿಪಿಐಎಂ ಪಕ್ಷದ ಮುಖಂಡರಾದ ರಾಜೀವ ಪಡುಕೋಣೆ, ಸುರೇಶ ಕಲ್ಲಾಗರ, ಪಿಲಿಪ್ ಡಿಸಿಲ್ವ, ವೆಂಕಟೇಶ ಕೋಣಿ, ಶೀಲಾವತಿ, ಗ್ರಾಪಂ ಸದಸ್ಯ ರಾದ ನಾಗರತ್ನ ನಾಡ, ರಾಜೇಶ್ ಪಡುಕೋಣೆ, ಮನೋರಮ ಭಂಡಾರಿ, ಸ್ಥಳೀಯ ಮುಖಂಡರಾದ ರಾಜೀವ ಭಂಡಾರಿ, ಲಯನ್ಸ್ ರಬೆಲ್ಲೊ, ಶಂಕರ ಬೆದ್ರಾಡಿ ವೆುೂದಲಾದವರು ಉಪಸ್ಥಿತರಿದ್ದರು.