ಪ್ರಮಾಣವಚನದ ಬಳಿಕ ರಾಜ್ಯಸಭಾ ಸದಸ್ಯತ್ವದ ಬಗ್ಗೆ ಮಾತನಾಡುವೆ:ಮಾಜಿ ಸಿಜೆಐ ಗೊಗೊಯಿ

Update: 2020-03-17 15:59 GMT

ಗುವಾಹಟಿ,ಮಾ.17: ರಾಜ್ಯಸಭಾ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತಾನು ಸದಸ್ಯತ್ವದ ಕೊಡುಗೆಯನ್ನು ಒಪ್ಪಿಕೊಂಡಿದ್ದರ ಕುರಿತು ವಿವರವಾಗಿ ಮಾತನಾಡುವುದಾಗಿ ಮಾಜಿ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ರಂಜನ್ ಗೊಗೊಯಿ ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಕೇಂದ್ರ ಸರಕಾರವು ಗೊಗೊಯಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮಕರಣ ಮಾಡಿರುವುದನ್ನು ಹಲವಾರು ಪಕ್ಷಗಳು ಪ್ರಶ್ನಿಸಿವೆ.

‘ಬಹುಶಃ ನಾಳೆ ನಾನು ದಿಲ್ಲಿಗೆ ತೆರಳುತ್ತೇನೆ. ಮೊದಲು ಪ್ರಮಾಣ ವಚನ ಸ್ವೀಕರಿಸಲು ಬಿಡಿ. ನಂತರ ನಾನೇಕೆ ರಾಜ್ಯಸಭಾ ಸದಸ್ಯತ್ವವನ್ನು ಒಪ್ಪಿಕೊಂಡಿದ್ದೇನೆ ಎಂಬ ಬಗ್ಗೆ ಮಾಧ್ಯಮಗಳೊಂದಿಗೆ ವಿವರವಾಗಿ ಮಾತನಾಡುತ್ತೇನೆ ’ಎಂದು ಗೊಗೊಯಿ ಹೇಳಿದರು.

 ರಾಜ್ಯಸಭೆಗೆ ತನ್ನ ನಾಮಕರಣದ ಬಗ್ಗೆ ಟೀಕೆಗಳ ಕುರಿತಂತೆ ಗೊಗೊಯಿ, ‘ರಾಷ್ಟ್ರನಿರ್ಮಾಣಕ್ಕಾಗಿ ಒಂದು ಕಾಲಘಟ್ಟದಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗ ಜೊತೆಯಾಗಿ ಶ್ರಮಿಸಬೇಕು ಎನ್ನುವುದು ತನ್ನ ಬಲವಾದ ನಂಬಿಕೆ,ರಾಜ್ಯಸಭೆಗೆ ನಾಮಕರಣದ ಕೊಡುಗೆಯನ್ನು ಒಪ್ಪಿಕೊಳ್ಳಲು ಇದೂ ಒಂದು ಕಾರಣ. ಸಂಸತ್ತಿನಲ್ಲಿ ನನ್ನ ಉಪಸ್ಥಿತಿಯು ಶಾಸಕಾಂಗದ ಮುಂದೆ ನ್ಯಾಯಾಂಗದ ಅಭಿಪ್ರಾಯಗಳನ್ನು ಬಿಂಬಿಸಲು ಮತ್ತು ನ್ಯಾಯಾಂಗದ ಮುಂದೆ ಶಾಸಕಾಂಗದ ಅಭಿಪ್ರಾಯಗಳನ್ನಿರಿಸಲು ಅವಕಾಶ ಒದಗಿಸಲಿದೆ. ನಾನು ಸಂಸತ್ತಿನಲ್ಲಿ ಸ್ವತಂತ್ರವಾಗಿ ಧ್ವನಿಯೆತ್ತುವ ಶಕ್ತಿಯನ್ನು ದೇವರು ನನಗೆ ನೀಡಲಿ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News