×
Ad

ಕೊರೋನ ಭೀತಿ: ಜುಮಾ ನಮಾಝ್ ಶೀಘ್ರ ಪೂರ್ಣಗೊಳಿಸಲು ಜಿಲ್ಲಾ ಖಾಝಿ ಸೂಚನೆ

Update: 2020-03-17 22:31 IST

ಮಂಗಳೂರು, ಮಾ.17: ಪ್ರಪಂಚದಾದ್ಯಂತ ತಾಂಡವಾಡುತ್ತಿರುವ ಕೊರೋನ ಸೋಂಕಿನ ಬಿಸಿ ದೇಶಕ್ಕೂ ತಟ್ಟಿದೆ. ಸೋಂಕು ಭೀತಿಯ ಹಿನ್ನೆಲೆಯಲ್ಲಿ ಜುಮಾ ನಮಾಝ್ ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸೂಚನೆ ನೀಡಿದ್ದಾರೆ.

ಕೊರೋನ ಸೋಂಕಿನ ಬಗ್ಗೆ ರಾಜ್ಯ ಸರಕಾರವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದು, ದ.ಕ. ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ವುಝೂ ಮಾಡುವ ನೀರಿನ ಟ್ಯಾಂಕ್‌ನಲ್ಲಿರುವ ನೀರನ್ನು ಉಪಯೋಗಿಸಬಾರದು. ಪೈಪ್ ಮುಖಾಂತರ ಬರುವ ನೀರನ್ನೇ ಬಳಸಬೇಕು ಎಂದರು.

ಎಲ್ಲರೂ ಮನೆಯಲ್ಲಿಯೇ ವುಝೂ ಮಾಡಿ ಜಮಾಅತ್‌ಗೆ ಬರಬೇಕು. ಜುಮಾ ಮತ್ತು ಜಮಾಅತ್ ನಮಾಝ್ ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಮಸೀದಿಯಲ್ಲಿ ಇರುವ ಹವಾ ನಿಯಂತ್ರಿತಗಳನ್ನು (ಎ.ಸಿ.) ಉಪಯೋಗಿಸಬಾರದು ಎಂದು ಜಿಲ್ಲಾ ಖಾಝಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News