×
Ad

ಮಳಲಿಪೇಟೆ: ಮಜ್ಲಿಸುನ್ನೂರು ಮುಂದೂಡಿಕೆ

Update: 2020-03-17 22:32 IST

ಮಂಗಳೂರು, ಮಾ.17: ಮಳಲಿಪೇಟೆ ಜುಮಾ ಮಸೀದಿ ವತಿಯಿಂದ ಮಂಗಳೂರು ತಾಲೂಕಿನ ತೆಂಕುಳಿಪಾಡಿಯ ಮಳಲಿಪೇಟೆಯಲ್ಲಿ ಮಾ.18ರಿಂದ ನಡೆಯಬೇಕಿದ್ದ ವಾರ್ಷಿಕ ಸ್ವಲಾತ್ ಹಾಗೂ ಮಜ್ಲಿಸುನ್ನೂರು ಕಾರ್ಯಕ್ರಮವು ಮುಂದೂಡಿಕೆಯಾಗಿದೆ.

ಕೊರೋನ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ಆದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಮಾ.18ರಿಂದ 20ರವರೆಗೆ ನಡೆಯಲಿದ್ದ ವಾರ್ಷಿಕ ಸ್ವಲಾತ್ ಹಾಗೂ ಮಜ್ಲಿಸುನ್ನೂರು ಸಮಾರಂಭವನ್ನು ಮುಂದೂಡಿಕೆ ಮಾಡಲಾಗಿದೆ. ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಮಳಲಿ ಜುಮಾ ಮಸೀದಿಯ ಅಧ್ಯಕ್ಷ ಮಾಮು ಮನೇಲ್   ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News