×
Ad

ಉಪ್ಪಿನಂಗಡಿಯ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಸೋಂಕು ಇಲ್ಲ: ವೈದ್ಯಾಧಿಕಾರಿ

Update: 2020-03-17 22:45 IST

ಉಪ್ಪಿನಂಗಡಿ: ಸೌದಿ ಅರೇಬಿಯಾದಿಂದ ಬಂದಿದ್ದ ವೃದ್ಧರೋರ್ವರನ್ನು ಕೊರೋನಾ ಭೀತಿಯಿಂದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾ ಗಿದ್ದು, ಪರೀಕ್ಷಾ ವರದಿಗಳು ಅವರಿಗೆ ಕೊರೊನಾ ವೈರಸ್ ಸೋಂಕು ಇಲ್ಲವೆಂದು ದೃಢಪಡಿಸಿವೆ.

ಬೆಳ್ತಂಗಡಿ ತಾಲೂಕು ತಣ್ಣೀರುಪಂಥ ನಿವಾಸಿಯಾಗಿರುವ  70ರ ಹರೆಯದ ಇವರು ತನ್ನ ಮಗಳು ಅಳಿಯನೊಂದಿಗೆ ಕೆಲ ದಿನಗಳ ಹಿಂದೆಯಷ್ಟೇ ಉಮ್ರಾ ಯಾತ್ರೆ ಮುಗಿಸಿ ಸ್ವದೇಶಕ್ಕೆ ಹಿಂತಿರುಗಿದ್ದರು. 15 ದಿನಗಳ ಕಾಲ ವಿದೇಶದಲ್ಲಿದ್ದ ಅವರು  ಹತ್ತು ದಿನಗಳ ಹಿಂದೆ  ಸ್ವದೇಶಕ್ಕೆ ಹಿಂತಿರುಗಿದ್ದರು. ಆದರೆ ಕೆಲ ದಿನಗಳಿಂದ ಶೀತ ಕೆಮ್ಮು ನೆಗಡಿಯಿಂದ ಬಳಲುತ್ತಿರುವ ಇವರನ್ನು ಆರೋಗ್ಯ ಇಲಾಖೆಯ ನಿರ್ದೇಶನದನ್ವಯ ಆಶಾ ಕಾರ್ಯಕರ್ತೆಯರು ಹೆಚ್ಚಿನ ನಿಗಾವಿರಿಸಲು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು.

ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ಹೆಚ್ಚಿನ ನಿಗಾದಲ್ಲಿರಿಸಿ, ಪರೀಕ್ಷೆಗಾಗಿ ಗಂಟಲಿನ ಸ್ರಾವವನ್ನು ಹಾಸನದ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಅದರ ವರದಿ ಬಂದಿದ್ದು, ಅವರಿಗೆ ಕೊರೋನಾ ನೆಗೆಟಿವ್ ಎಂದು ಬಂದಿದೆ. ಈ ಮೂಲಕ ಪರಿಸರದಲ್ಲಿ ಮೂಡಿದ್ದ ಭಯದ ವಾತಾವರಣ ದೂರವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News