×
Ad

ವೃದ್ಧ ದಂಪತಿ ಮನೆಯಲ್ಲಿ ದರೋಡೆ: ನಗ-ನಗದು ದೋಚಿ ಪರಾರಿ

Update: 2020-03-17 22:57 IST

ಮೂಡುಬಿದಿರೆ:  ಮನೆಯ ಬಾಗಿಲನ್ನು  ಮುರಿದು ಒಳಗ್ಗೆ ನುಗ್ಗಿದ ದರೋಡೆಕೋರರು ವೃದ್ಧ ದಂಪತಿಗೆ ಚಾಕು ತೋರಿಸಿ ಬೆದರಿಸಿ ನಗ-ನಗದು ದೋಚಿ ಪರಾರಿಯಾದ ಘಟನೆ ರವಿವಾರ ರಾತ್ರಿ ಪ್ರಾಂತ್ಯ ಗ್ರಾಮದ ಪೇಪರ್ ಮಿಲ್ ಎಂಬಲ್ಲಿ ನಡೆದಿದೆ.

ಎಸ್.ಜೆ ಮಿರಾಂಡ ಮತ್ತು ಅವರ ಪತ್ನಿ ಮನೆಯಲ್ಲಿದ್ದರು. ದರೋಡೆಕೋರರು ಮನೆಯಲ್ಲಿದ್ದ ವೃದ್ಧ ದಂಪತಿಗೆ ಚಾಕು ತೋರಿಸಿ ಮೈಮೇಲಿದ್ದ ಚಿನ್ನಾಭರಣ ಮತ್ತು ಕವಾಟಿನಲ್ಲಿದ್ದ ನಗ ನಗದು ದರೋಡೆಗೈದು ಪರಾರಿಯಾಗಿದ್ದಾರೆ. ತಂಡದಲ್ಲಿ ಸುಮಾರು ಮೂರ್ನಾಲ್ಕು ಮಂದಿ ಇದ್ದರು ಎನ್ನಲಾಗಿದೆ. ಈ ಪರಿಸರದಲ್ಲಿ ಮಿರಾಂಡ ಅವರ ಮನೆ ಬಿಟ್ಟರೆ ಹತ್ತಿರದಲ್ಲಿ ಬೇರೆ ಮನೆ ಇಲ್ಲ. ಇದರ ಬಗ್ಗೆ ಮಾಹಿತಿ ತಿಳಿದು ದರೋಡೆಕೋರರು ಕೃತ್ಯ ನಡೆಸಿರಬೇಕೆನ್ನಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News