ಹರ್ಯಾಣ: ಮಹಿಳೆಗೆ ಕೊರೋನ ಸೋಂಕು

Update: 2020-03-17 17:39 GMT

ಚಂಡಿಗಢ, ಮಾ. 16: ಮಲೇಶ್ಯಾ ಹಾಗೂ ಇಂಡೋನೇಶ್ಯಾಕ್ಕೆ ಪ್ರಯಾಣ ಮಾಡಿ ಹಿಂದಿರುಗಿದ ಹರ್ಯಾಣದ ಗುರುಗ್ರಾಮ್‌ನ 29 ವರ್ಷದ ಮಹಿಳೆಯೋರ್ವರಿಗೆ ಕೊರೋನ ವೈರಸ್ ಸೋಂಕು ತಗುಲಿದೆ. ಮಹಿಳೆ ಗುರುಗ್ರಾಮ ಮೂಲದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ‘‘ಹರ್ಯಾಣದಲ್ಲಿ ಬೆಳಕಿಗೆ ಬಂದಿರುವ ಮೊದಲ ಕೊರೋನ ಪ್ರಕರಣ ಇದಾಗಿದೆ’’ ಎಂದು ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ನಿರ್ದೇಶಕ ಸೂರಜ್ ಭಾನ್ ಕಂಬೋಜ್ ತಿಳಿಸಿದ್ದಾರೆ.

ಮಹಿಳೆಯನ್ನು ಗುರುಗಾಂವ್‌ನ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ. ಮಹಿಳೆಯ ಗಂಟಲ ದ್ರವವನ್ನು ಪುಣೆ ಮೂಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿಕೊಡಲಾಗಿತ್ತು. ಅವರು ಕೊರೋನ ವೈರಸ್ ಸೋಂಕು ತಗಲಿರುವುದನ್ನು ದೃಢಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News