×
Ad

ಮಂಗಳೂರು : ವಿಮಾನಯಾನ ಸೇವೆಯಲ್ಲಿ ಮತ್ತೆ ವ್ಯತ್ಯಯ

Update: 2020-03-18 17:02 IST

ಮಂಗಳೂರು, ಮಾ.18: ವಿಶ್ವದಾದ್ಯಂತ ಕಾಣಿಸಿಕೊಂಡಿರುವ ಕೊರೋನ ಸೋಂಕು ಭಾರತದಲ್ಲೂ ಭೀತಿ ಮೂಡಿಸಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಜ್ಪೆಯ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶದ ವಿವಿಧೆಡೆಗೆ ತೆರಳುವ ಹಲವು ವಿಮಾನಯಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳುವ ಇಂಡಿಗೋ 6ಎ/0131 ಮತ್ತು 6ಇ 0425 ವಿಮಾನ ಸೇವೆಯನ್ನು ಮಾ.19ರವರೆಗೆ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಮಣಿಪುರ ಮತ್ತು ಕಲ್ಕತ್ತಾ 6ಇ 0875 ವಿಮಾನದ ಸೇವೆಯಲ್ಲೂ ಮಾ.19ರವರೆಗೆ ವ್ಯತ್ಯಯವಾಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಬರುವ 6ಇ 0132, 6ಇ 0369, 6ಇ 0877 ವಿಮಾನ ಯಾನವನ್ನೂ ಮಾ.19ರವರೆಗೆ ರದ್ದುಪಡಿಸಲಾಗಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News