×
Ad

ಜಾಮಿಯಾ ಮಸ್ಜಿದ್ ಉಡುಪಿ : ನಮಾಝ್ ವೇಳಾಪಟ್ಟಿಯಲ್ಲಿ ತಾತ್ಕಾಲಿಕ ಬದಲಾವಣೆ

Update: 2020-03-18 19:48 IST
ಸಾಂದರ್ಭಿಕ ಚಿತ್ರ

ಉಡುಪಿ : ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸರಕಾರದ ಆದೇಶದ ಮೇರೆಗೆ ಜಾಮಿಯಾ ಮಸೀದಿಯಲ್ಲಿ ನಮಾಝ್ ವೇಳಾಪಟ್ಟಿಯನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದ್ದು, ಇದು ಮುಂದಿನ ಆದೇಶದ ತನಕ ಜಾರಿಯಲ್ಲಿರುವುದಾಗಿ ಮಸೀದಿಯ ಪ್ರಕಟನೆ ತಿಳಿಸಿದೆ.

ಸುಬಹಿ ನಮಾಝನ್ನು ಹೊರತುಪಡಿಸಿ ಉಳಿದ ನಾಲ್ಕು ಹೊತ್ತಿನ ದೈನಂದಿನ ನಮಾಝ್ ಗಳನ್ನು ಅಝಾನ್ ಆದ ಕೂಡಲೇ ನಿರ್ವಹಿಸಲಾಗುವುದು.

ಜುಮಾ ನಮಾಝ್ ವೇಳಾಪಟ್ಟಿ:

ಅಝಾನ್ - 12.40 ಕ್ಕೆ
ಖುತ್ಬಾ - 12.45 ಕ್ಕೆ
ನಮಾಝ್ - 12.55 ಕ್ಕೆ

ಪುರುಷರಿಗೆ ಮಸೀದಿಯ ಒಳಗಿನ ಮಿಂಬರ್ ಹಾಲ್ ನಲ್ಲಿ ನಮಾಝ್ ಮಾಡಲು ಅವಕಾಶವಿರುವುದಿಲ್ಲ. ತಾತ್ಕಾಲಿಕವಾಗಿ ಮಸೀದಿಯ ಹೊರಭಾಗದಲ್ಲಿ ನಮಾಝ್ ನಿರ್ವಹಿಸಲಾಗುವುದು. ಪ್ರತಿ ನಮಾಝ್ ನಂತರ ನಮಾಝ್ ನಿರ್ವಹಿಸಿದ ಸ್ಥಳವನ್ನು ಡೆಟೋಲ್ ಮೂಲಕ ಸ್ವಚ್ಛಗೊಳಿಸಲಾಗುವುದು. ಮುಂದಿನ ಆದೇಶದ ವರೆಗೆ ಮಸೀದಿಯಲ್ಲಿ ಮಹಿಳೆಯರ ನಮಾಝ್, ಮದ್ರಸಾ, ಸ್ಟಡಿ ಕ್ಲಾಸ್ ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ ಎಂದು ಉಡುಪಿ ಜಾಮಿಯಾ ಮಸೀದಿಯ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News