ಮಾ.19ರಂದು ಮಂಗಳೂರಿನ ಹಲವೆಡೆ ನೀರು ಪೂರೈಕೆ ಸ್ಥಗಿತ
Update: 2020-03-18 19:59 IST
ಮಂಗಳೂರು, ಮಾ.18: ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯಾದ ತುಂಬೆಯಿಂದ ಮಂಗಳೂರಿಗೆ ನೀರು ಪೂರೈಸುವ ಕೊಳವೆಯ ದುರಸ್ತಿ ಕಾರ್ಯ ನಡೆಯಲಿದ್ದು, ಮಾ.19ರಂದು ನಗರದ ವಿವಿಧೆಡೆ ನೀರು ಪೂರೈಕೆಯಲ್ಲಿ ಸಂಪೂರ್ಣವಾಗಿ ನಿಲುಗಡೆಯಾಗಲಿದೆ.
ತುಂಬೆಯಿಂದ ಬೆಂದೂರು, ಪಣಂಬೂರು ಕಡೆಗೆ ನೀರು ಪೂರೈಸುವ 1000 ಮಿ.ಮೀ. ವ್ಯಾಸದ ಮುಖ್ಯ ಕೊಳವೆಯು ಅಡ್ಯಾರ್ ಕಟ್ಟೆ ಹಾಗೂ ಕೂಳೂರು ಗೋಲ್ಡ್ ಪಿಂಚ್ ಸಿಟಿ ಬಳಿ ಸೋರುವಿಕೆ ಉಂಟಾಗಿದೆ. ನೀರು ಸೋರುವಿಕೆ ದುರಸ್ತಿ ಕಾರ್ಯವು ಮಾ.19ರಂದು ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಪಣಂಬೂರು, ಕಾನ, ಬಾಳ, ಕಾಟಿಪಳ್ಳ, ಮುಕ್ಕ, ಮಾಲೆಮಾರ್, ಕೋಡಿಕಲ್, ಕಾರ್‌ಸ್ಟ್ರೀಟ್, ಬಂದರು, ಕುದ್ರೋಳಿ ಹಾಗೂ ಇತರ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಪ್ರಕಟನೆ ತಿಳಿಸಿದೆ.