×
Ad

ಸಿಎಂ ಫಂಡ್: ಸಂತ್ರಸ್ತರಿಗೆ ಐವನ್ ಡಿಸೋಜ ಚೆಕ್ ವಿತರಣೆ

Update: 2020-03-18 20:25 IST

ಮಂಗಳೂರು, ಮಾ.18: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಶಿಫಾರಸಿನ ಮೇರೆಗೆ ಎಂಟು ಅರ್ಜಿದಾರರಿಗೆ 2.11 ಲಕ್ಷ ರೂ. ಪರಿಹಾರ ಧನದ ಚೆಕ್‌ನ್ನು ಮನಪಾದ ತಮ್ಮ ಕಚೇರಿಯಲ್ಲಿ ವಿತರಿಸಿದರು.

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೋಷನ್ ಸುರೇಶ್ ಡಿಸೋಜಗೆ 59,980 ರೂ., ಸಾರಮ್ಮ ಸುಳ್ಯ 40 ಸಾವಿರ ರೂ., ಸೈದಾಲಿ ಕುಟ್ಟಿ ಸುಳ್ಯ 40 ಸಾವಿರ ರೂ., ಕೆ.ಪಿ. ಬಾಲಕೃಷ್ಣ ರೈ ಪುತ್ತೂರು 40 ಸಾವಿರ ರೂ., ಸಮೀನಾ ಮಡಿಕೇರಿ 17,106 ರೂ. ರೂ., ಆಲಿಮಮ್ಮ ಹಳೆಯಂಗಡಿ ಅವರಿಗೆ 14,770 ರೂ.ನ್ನು ಶಾಸಕರು ಅರ್ಜಿದಾರರಿಗೆ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News