×
Ad

ಮಂಗಳೂರು: ಟಿವಿಎಸ್ ಎಕ್ಸ್ಎಲ್100 ಬಿಎಸ್-6 ಶ್ರೇಣಿ ಬಿಡುಗಡೆ

Update: 2020-03-18 20:35 IST

ಮಂಗಳೂರು: ಟಿವಿಎಸ್ ಮೋಟರ್ ಕಂಪನಿ ತಮ್ಮ 2020 ಟಿವಿಎಸ್ ಎಕ್ಸ್ಎಲ್100 ಬಿಎಸ್-6 ಶ್ರೇಣಿಯನ್ನು ಮಂಗಳೂರು ಮಾರುಕಟ್ಟೆಗೆ ಇಂದು ಬಿಡುಗಡೆ ಮಾಡಿದೆ.

ವಿಶಿಷ್ಟ ಎಕೋ ಫಸ್ಟ್ ಫ್ಯೂಯೆಲ್ ಇಂಜೆಕ್ಷನ್ (ಇಟಿಎಫ್‍ಐ) ತಂತ್ರಜ್ಞಾನವನ್ನು ಹೊಂದಿರುವ ಈ ವಾಹನದ ನಿರ್ವಹಣೆ ತೀರಾ ಮಿತ ವೆಚ್ಚದಾಯಕವಾಗಲಿದ್ದು, ವಾಹನ  ಸದ್ದಿಲ್ಲದೇ ಸರಾಗವಾಗಿ ಚಾಲನೆಗೊಳ್ಳಲು ಅನುವಾಗುವಂತೆ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ಐಎಸ್‍ಜಿ) ವ್ಯವಸ್ಥೆಯನ್ನು ಇದು ಹೊಂದಿದೆ ಎಂದು ಸಂಸ್ಥೆಯ ಪ್ರಕಟಣೆ ಹೇಳಿದೆ.

ಬಿಎಸ್-6 ಅನುಸರಣೆಯ ಈ ವಾಹನ ಉತ್ತಮ ಮೈಲೇಜ್, ಐ-ಟಚ್ ಸ್ಟಾರ್ಟ್, ಸುಲಭವಾದ ಆನ್-ಆಫ್ ಸ್ವಿಚ್, ಮೊಬೈಲ್ ಚಾರ್ಜರ್, ಇಂಧನ ರಿಸರ್ವ್ ಇಂಡಿಕೇಟರ್, ದೊಡ್ಡ ಫ್ಲೋರ್‍ಬೋರ್ಡ್ ಮತ್ತಿತರ ವೈಶಿಷ್ಟ್ಯಗಳನ್ನು ಹೊಂದಿದ್ದು, ಹೆವಿಡ್ಯೂಟಿ ವಾಹನದ ಬೆಲೆ ರೂ. 43,439ರಿಂದ ಆರಂಭ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News