×
Ad

ಟ್ಸಾಕ್ಸಿಮೆನ್ಸ್ ನಿಯೋಗದಿಂದ ಸಿಎಂ, ಡಿಸಿಎಂ ಭೇಟಿ

Update: 2020-03-18 20:58 IST

ಉಡುಪಿ, ಮಾ.18: ಉಡುಪಿ ಜಿಲ್ಲಾ ಟ್ಸಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಸಂಘಟನೆಯ ನಿಯೋಗವು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪಮತ್ತು ಸಾರಿಗೆ ಸಚಿವರಾಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮ್ಯಾಕ್ಸಿಕ್ಯಾಬ್ನ ಆಸನಗಳ ತೆರಿಗೆ ವಿನಾಯಿತಿ ಕುರಿತು ಮನವಿ ಸಲ್ಲಿಸಿತು.

ಸದ್ಯ ರಾಜ್ಯಾದ್ಯಂತ ಮ್ಯಾಕ್ಸಿಕ್ಯಾಬ್ ಮಾಲಕರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಮುಖ್ಯಮಂತ್ರಿಗೆ ಸವಿವರವಾದ ಮಾಹಿತಿ ನೀಡಿದ ನಿಯೋಗ, ಕಳೆದ ಬಜೆಟ್ನಲ್ಲಿ ನಿಗದಿ ಪಡಿಸಿದ ಪ್ರತಿ ಆಸನಕ್ಕೆ 900ರೂ. ತೆರಿಗೆ ಹಣವನ್ನು 600ರೂ.ಗೆ ಇಳಿಸುವಂತೆ ಮನವಿ ಮಾಡಲಾಯಿತು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ, ಮ್ಯಾಕ್ಸಿಕ್ಯಾಬ್ನ ಪ್ರತಿ ಆಸನಕ್ಕೆ 600 ರೂ. ತೆರಿಗೆ ನಿಗದಿ ಪಡಿಸುವುದಾಗಿ ಭರವಸೆ ನೀಡಿದರು ಎಂದು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ.ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News