×
Ad

ಕೊರೋನಾ ವೈರಸ್ ಭೀತಿ ಹಿನ್ನೆಲೆ: ಮಾ.31ರವರೆಗೆ ಗ್ರಂಥಾಲಯ ಸ್ಥಗಿತ

Update: 2020-03-18 21:33 IST

ಉಡುಪಿ, ಮಾ.18: ಕರೋನಾ ವೈರಾಣು ಕಾಯಿಲೆ-2019 ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರದ ಆದೇಶದಂತೆ ಹಾಗೂ ಇಲಾಖಾ ನಿರ್ದೇಶಕರ ಸೂಚನೆ ಮೇರೆಗೆ ನಗರದ ಕೆಎಂ ಮಾರ್ಗದಲ್ಲಿರುವ ನಗರ ಕೇಂದ್ರ ಗ್ರಂಥಾಲಯ, ಉಡುಪಿಯ ಮುಖ್ಯ ಶಾಖೆ ಹಾಗೂ ಇದರ ವ್ಯಾಪ್ತಿಯಲ್ಲಿ ಬರುವ ಶಾಖಾ ಗ್ರಂಥಾಲಯಗಳಲ್ಲಿ ಮಾ.31 ರವರೆಗೆ ಸಾರ್ವಜನಿಕ ಓದುಗರಿಗೆ ತಾತ್ಕಾಲಿಕವಾಗಿ ಗ್ರಂಥಾಲಯ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಪುಸ್ತಕ ಎರವಲು ಸೇವೆಯನ್ನು ಮಾತ್ರ ನೀಡಲಾಗುವುದು ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News