ಹಕ್ಲಾಡಿ: ಕೃಷಿಕೂಲಿಕಾರರ ಬೃಹತ್ ಸಮಾವೇಶ
Update: 2020-03-18 22:00 IST
ಕುಂದಾಪುರ, ಮಾ.18: ಹಕ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಗ್ವಾಡಿ ಪ್ರದೇಶದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೃಷಿ ಕೂಲಿ ಕಾರ್ಮಿಕರ ಬೃಹತ್ ಸಮಾವೇಶ ಇತ್ತೀಚೆಗೆ ಜರಗಿತು.
ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡಿ, ಸಂಘದ ರಾಜ್ಯ ಸಮಿತಿ ಕರೆಯಂತೆ ಮಾ.31ರಂದು ರಾಜ್ಯವ್ಯಾಪಿ ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರ ಗಳಲ್ಲಿ ಕೂಲಿಕಾರರ ಬೇಡಿಕೆ ದಿನಾಚರಣೆ ಹೋರಾಟ ನಡೆಯಲಿದೆ. ಇದರ ಅಂಗವಾಗಿ ಅಂದು ಕುಂದಾಪುರ ತಾಪಂ ಕಚೇರಿ ಎದುರು ಕೂಲಿಕಾರರ ಸಾಮೂಹಿಕ ಧರಣಿ ಮುಷ್ಕರ ಜರಗಲಿದೆ ಎಂದರು.
ನರೇಗಾ ಕೂಲಿ ದಿನ ಒಂದರ ರೂಪಾಯಿ 600ರೂ., ವಾರ್ಷಿಕ 250 ದಿನ ಕೂಲಿ ಕೆಲಸ ಹಾಗೂ ಎಲ್ಲಾ ಗ್ರಾಪಂಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಗೊಳಿಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೃಷಿಕೂಲಿಕಾರರ ಸಂಘದ ಮುಖಂಡರಾದ ನಾಗರತ್ನ ನಾಡ, ಶೀಲಾವತಿ ಹಡವು ಮೊದಲಾದವರು ಉಪಸ್ಥಿತರಿದ್ದರು.