ಖಾದರ್ ಮಹಲ್ ಹಮ್ಮಬ್ಬ ಹಾಜಿ ನಿಧನ
Update: 2020-03-18 22:32 IST
ಮಂಗಳೂರು, ಮಾ.18: ಉಳ್ಳಾಲ ಕೋಟೆಪುರದ ಖಾದರ್ ಮಹಲ್ ಹಮ್ಮಬ್ಬ ಹಾಜಿ (76) ಬುಧವಾರ ಸಂಜೆ ನಿಧನರಾದರು.
ಅವರು ಸೈಯದ್ ಮದನಿ ದರ್ಗಾ ಮತ್ತು ಅದರ ಅಧೀನ ಸಂಸ್ಥೆಯಲ್ಲಿ ಸುಮಾರು 20 ವರ್ಷಕ್ಕೂ ಮೇಲ್ಪಟ್ಟು ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
ಮೃತರು ಪತ್ನಿ, ನಾಲ್ಕು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ದಫನ್ ಕಾರ್ಯವು ಮಾ.19ರಂದು (ಗುರುವಾರ) ಲುಹರ್ ನಮಾಝ್ ನಂತರ ಕೋಟೆಪುರದ ಜುಮಾ ಮಸೀದಿಯ ವಠಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.