ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಚುನಾವಣೆ: ಫ್ಲೋರಿಡ, ಇಲಿನಾಯಿಸ್‌ಗಳಲ್ಲಿ ಜೋ ಬೈಡನ್‌ಗೆ ಭರ್ಜರಿ ಜಯ
Update: 2020-03-18 23:29 IST
ಮಯಾಮಿ (ಅಮೆರಿಕ), ಮಾ. 18: ಮಂಗಳವಾರ ನಡೆದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಚುನಾವಣೆಯಲ್ಲಿ ಅಮೆರಿಕದ ಮಾಜಿ ಉಪಾಧ್ಯಕ್ಷ ಜೋ ಬೈಡನ್ ತನ್ನ ಎದುರಾಳಿ ಬರ್ನೀ ಸ್ಯಾಂಡರ್ಸ್‌ರನ್ನು ಫ್ಲೋರಿಡ ಮತ್ತು ಇಲಿನಾಯಿಸ್ ರಾಜ್ಯಗಳಲ್ಲಿ ಸೋಲಿಸಿದ್ದಾರೆ. ಇದರೊಂದಿಗೆ ಅವರು, ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಎದುರಿಸುವುದು ಬಹುತೇಕ ಖಚಿತವಾಗಿದೆ.
ಫ್ಲೋರಿಡದಲ್ಲಿ 77 ವರ್ಷದ ಬೈಡನ್ 62 ಶೇಕಡ ಮತಗಳನ್ನು ಪಡೆದರೆ, ಅವರ ಎದುರಾಳಿ 78 ವರ್ಷದ ಸ್ಯಾಂಡರ್ಸ್ 23 ಶೇಕಡ ಮತಗಳನ್ನು ಪಡೆದರು.
ಇಲಿನಾಯಿಸ್‌ನಲ್ಲಿ ಬೈಡನ್ 59 ಶೇಕಡ ಮತಗಳನ್ನು ಗಳಿಸಿದರು. ಸ್ಯಾಂಡರ್ಸ್ 36 ಶೇಕಡ ಮತಗಳಿಗೆ ತೃಪ್ತಿಪಟ್ಟರು.