ಮಂಗಳೂರು : ಜುಮಾ ನಮಾಝ್ ಸಮಯದಲ್ಲಿ ತಾತ್ಕಾಲಿಕ ಬದಲಾವಣೆ
ಮಂಗಳೂರು, ಮಾ.19: ಕೊರೋನ ವೈರಸ್ ಭೀತಿಯಿಂದ ಸರಕಾರವು ನಿರ್ಬಂಧಕಾಜ್ಞೆ ವಿಧಿಸಿದ ಹಿನ್ನೆಲೆ ಮತ್ತು ಆರೋಗ್ಯ ಸುರಕ್ಷತೆಯ ನಿಟ್ಟಿನಲ್ಲಿ ನಗರ ಮತ್ತು ಹೊರವಲಯದ ಕೆಲವು ಮಸೀದಿಗಳಲ್ಲಿ ಶುಕ್ರವಾರದ ಜುಮಾ ನಮಾಝ್‌ನ ಸಮಯದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.
ನಗರದ ಪಂಪ್‌ವೆಲ್‌ನ ಮಸ್ಜಿದುತ್ತಖ್ವಾದಲ್ಲಿ ಜುಮಾ ಖುತ್ಬಾ ಮಧ್ಯಾಹ್ನ 12:50ಕ್ಕೆ ಮತ್ತು ಜುಮಾ ನಮಾಝ್ 1 ಗಂಟೆಗೆ ನಡೆಯಲಿದೆ. ಅದಲ್ಲದೆ ಸ್ಟೇಟ್‌ಬ್ಯಾಂಕ್ ಸಮೀಪದ ಮಸ್ಜಿದ್ ಇಬ್ರಾಹಿಂ ಅಲ್ ಖಲೀಲ್ ನಲ್ಲಿ ಮಧ್ಯಾಹ್ನ 12:45ಕ್ಕೆ ಖುತ್ಬಾ ಮತ್ತು 1 ಗಂಟೆಗೆ ನಮಾಝ್ ನಡೆಯಲಿದೆ. ನಗರದ ಫಳ್ನೀರ್‌ನ ಅಲ್ ಇಹ್ಸಾನ್ ಮಸ್ಜಿದ್‌ನಲ್ಲಿ ಮಧ್ಯಾಹ್ನ 12:50ಕ್ಕೆ ಖುತ್ಬಾ ಮತ್ತು 1:15ಕ್ಕೆ ನಮಾಝ್ ನಡೆಯಲಿದೆ. ನಗರದ ಬೋಳಾರ ಮಸ್ಜಿದ್‌ನಲ್ಲಿ ಮಧ್ಯಾಹ್ನ 1 ಗಂಟೆಗೆ ಖುತ್ಬಾ ಮತ್ತು 1:15ಕ್ಕೆ ನಮಾಝ್ ನಡೆಯಲಿದೆ. ತೊಕ್ಕೊಟ್ಟು ಮಸ್ಜಿದ್ ಹುದಾದಲ್ಲಿ 1:15ಕ್ಕೆ ನಮಾಝ್ ನಡೆಯಲಿದೆ.
ನಮಾಝ್ ಮತ್ತು ದುಆ ದೀರ್ಘಗೊಳಿಸದಂತೆ ಮತ್ತು ಆಝಾನ್ ಮೊಳಗಿದ 10 ನಿಮಿಷದಲ್ಲೇ ಖುತ್ಬಾ ಪ್ರವಚನ ಆರಂಭಿಸಿ ನಮಾಝ್ ಪೂರ್ತಿಗೊಳಿಸಬೇಕು ಎಂದು ಉಭಯ ಜಿಲ್ಲೆಯ ಖಾಝಿಗಳು ಈಗಾಗಲೆ ಮನವಿ ಮಾಡಿದ್ದಾರೆ. ಅದರಂತೆ ಖಾಝಿಯ ಮನವಿಗೆ ಸ್ಪಂದಿಸಲು ಮಸೀದಿಯ ಆಡಳಿತ ಕಮಿಟಿಯ ಪದಾಧಿಕಾರಿಗಳೊಂದಿಗೆ ವಿನಂತಿಸಿಕೊಂಡಿದ್ದಾರೆ.