ಹಳೆಯಂಗಡಿ: ಕೊರೊನ ವೈರಸ್ ಬಗ್ಗೆ ಸಾರ್ವಜನಿಕರಿಗೆ ಜನ ಜಾಗೃತಿ ಅಭಿಯಾನ

Update: 2020-03-19 11:51 GMT

ಹಳೆಯಂಗಡಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ, ಘಟಕ ದಕ್ಷಿಣ ಕನ್ನಡಜಿಲ್ಲೆ. ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರು ಕೆಮ್ರಾಲ್ ಇದರ ವತಿಯಿಂದ "ಕೊರೋನ ವೈರಸ್ - ಭಯ ಬೇಡ ಎಚ್ಚರವಿರಲಿ" ಎಂಬ ಶೀರ್ಷಿಕೆಯಡಿಯಲ್ಲಿ ಜನ ಜಾಗೃತಿ ಅಭಿಮಾನದ ಕರಪತ್ರ ಬಿಡುಗಡೆ ಕಾರ್ಯಕ್ರಮ ಬುಧವಾರ ಹಳೆಯಂಗಡಿ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು.

ಕೋರೋನ ಎಂಬುವುದು ಅದೊಂದು ಸಾಮಾನ್ಯ ವೈರಸ್, ಅದಕ್ಕೆ ಅಷ್ಟೊಂದು  ಹೆದರಬೇಕಾದ ಅಗತ್ಯವಿಲ್ಲ ನಾವು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಂಡಲ್ಲಿ ನಮಗೆ ಯಾವುದೇ ರೀತಿಯ ರೋಗಗಳು ಬಾರದು ಎಂದು ಹಳೆಯಂಗಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀಶೈಲ ಅಭಿಪ್ರಾಯ ಪಟ್ಟರು. 

ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ, ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು  ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ, ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್, ಸುವರ್ಣ ಮಹೋತ್ಸವ ಸಮಿತಿ, ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ, ಜಿಲ್ಲಾ ಪ್ರಶಸ್ತಿ ವಿಜೇತ ಯುವತಿ ಮತ್ತು ಮಹಿಳಾ ಮಂಡಲ  ಇದರ ಸಹ ಭಾಗಿತ್ವದಲ್ಲಿ ತಾಲೂಕು ಪಂಚಾಯತ್ ಸದಸ್ಯ ಜೀವನ್ ಪ್ರಕಾಶ್ ಕಾಮೇರೋಟ್ಟು, ಗ್ರಾಮ ಪಂಚಾಯತ್ ಮಾಜಿ ಸದಸ್ಯ ವಿನೋದ್ ಕುಮಾರ್ ಕೊಳುವೈಲು ಕರಪತ್ರವನ್ನು  ಬಿಡುಗಡೆಗೊಳಿಸಿ, ಆರೋಗ್ಯ ಮಾಹಿತಿ ನೀಡಿದರು.

ಈ ಸಂದರ್ಭ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಅಧ್ಯಕ್ಷ ಸುಧಾಕರ ಆರ್ ಅಮೀನ್, ಸಾಂಸ್ಕೃತಿಕ ಕಾರ್ಯದರ್ಶಿ ಲೋಕೇಶ್ ಚಿಲಿಂಬಿ, ಕ್ರೀಡಾ ಕಾರ್ಯದರ್ಶಿ ಮೋಹನ್ ಅಮೀನ್, ಟ್ರಸ್ಟಿಗಳಾದ  ರಾಮಚಂದ್ರ ಶೆಣೈ, ಸಲಹಾ ಸಮಿತಿಯ ಪಲಿಮಾರು ಜಗದೀಶ್ ಪಾವಂಜೆ, ಯುವಕ ಮಂಡಲದ ಕಾರ್ಯಕಾರಿ ಸಮಿತಿ ಸದಸ್ಯ ದಾಮೋದರ ಗೊಳಿದಾಡಿ,  ಕೃಷ್ಣ, ನಿಶಾಂತ್ ಕೊಪ್ಪಲ, ಪುಂಡಲೀಕ ಶೆಣೈ, ಪ್ರಕಾಶ್ ಆಚಾರ್ಯ, ಗ್ರಾಮ ಪಂಚಾಯತ್ ಹಳೆಯಂಗಡಿ ಇದರ ಸಿಬ್ಬಂದಿ ನವೀನ್,  ಮೋಹನ್, ಸವಾದ್, ನಳಿನಿ, ಪ್ರೀತಿಕಾ, ಯುವತಿ ಮಂಡಲದ ಅಧ್ಯಕ್ಷರಾದ  ದಿವ್ಯಶ್ರೀ ರಮೇಶ್ ಕೋಟ್ಯಾನ್, ವಿದ್ಯಾ, ನಿರ್ಮಿತ, ರಶ್ವಿತ, ಪ್ರಣವಿ, ನಿಧಿ, ಸಮೀಕ್ಷಾ, ಮಹಿಳಾ ಮಂಡಲದ ಸುಜಾತ ವಾಸುದೇವ, ಯಶವಂತಿ ಶೆಣೈ, ವಿದ್ಯಾ ನಾಗರಾಜ್, ಚಂದ್ರಿಕಾ ಪ್ರವೀಣ್, ಸ್ವಪ್ನ ಮೋಹನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News