ಬಾಲಕಿಯ ಮೇಲೆ ಅತ್ಯಾಚಾರ : ಆರೋಪಿ ಸೆರೆ
Update: 2020-03-19 19:24 IST
ಕಡಬ: ಮಾ.19. ಮೂರು ಮಕ್ಕಳ ತಂದೆಯೋರ್ವ ಬಾಲಕಿಯ ಮೇಲೆ ಅತ್ಯಾಚಾರಗೈದಿದ್ದಾನೆ ಎನ್ನಲಾಗಿದ್ದು, ಆಕೆ ಇದೀಗ ಆರು ತಿಂಗಳ ಗರ್ಭಿಣಿಯಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಡಬ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಡಬ ತಾಲೂಕಿನ ಕೆರ್ಮಾಯಿ ನಿವಾಸಿ ಮಹಾದೇವ(40) ಎಂದು ಗುರುತಿಸಲಾಗಿದೆ.
ಆರೋಪಿಯು ಕಡಬ ಠಾಣಾ ವ್ಯಾಪ್ತಿಯ ಬಾಲಕಿಯ ಮೇಲೆ ಅತ್ಯಾಚಾರಗೈದಿರುವುದಾಗಿ ಬಾಲಕಿ ನೀಡಿದ ದೂರಿನಂತೆ ಕಡಬ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.