ಹಾಶಿಮಿ ಮಸೀದಿ ನಾಯರ್‌ಕೆರೆ : ಜುಮಾ ನಮಾಝ್ ಸಮಯದಲ್ಲಿ ತಾತ್ಕಾಲಿಕ ಬದಲಾವಣೆ
Update: 2020-03-19 19:46 IST
ಉಡುಪಿ : ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸರಕಾರಿ ಆದೇಶದ ಮೇರೆಗೆ ಉಡುಪಿಯ ನಾಯರ್‌ಕೆರೆ ಹಾಶಿಮಿ ಮಸೀದಿಯ ಜುಮಾ ನಮಾಝ್ ವೇಳಾಪಟ್ಟಿಯನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ. ಇದು ತಾತ್ಕಾಲಿಕ ಕ್ರಮವಾಗಿದ್ದು, ಮುಂದಿನ ಆದೇಶದ ತನಕ ಜಾರಿಯಲ್ಲಿರುವುದಾಗಿ ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.
ಫಜಿರ್ ನಮಾಝನ್ನು ಅಝಾನ್ ಮುಕ್ತಾಯದ 10 ನಿಮಿಷಗಳ ನಂತರ ನಿರ್ವಹಿಸಲಾವುದು ಮತ್ತು ಉಳಿದ ನಾಲ್ಕು ಹೊತ್ತಿನ ದೈನಂದಿನ ನಮಾಝ್ ಆಝಾನ್ ಆದ ಕೂಡಲೇ ನಿರ್ವಹಿಸಲಾಗುವುದು.
ಜುಮಾ ನಮಾಝ್ ವೇಳಾಪಟ್ಟಿ
ಅಝಾನ್ 12.40ಕ್ಕೆ
ಖುತ್ಬಾ 12.45ಕ್ಕೆ
ನಮಾಝ್ 12.55ಕ್ಕೆ
ಮುಂದಿನ ಆದೇಶದವರೆಗೆ ಮಸೀದಿಯಲ್ಲಿ ಮಹಿಳೆಯರ ನಮಾಝ್, ಮದ್ರಸಾ, ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ ಹಾಶಿಮಿ ಮಸೀದಿಯ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.