×
Ad

ಮಂಗಳೂರು: ಕೊರೋನ ವೈರಸ್ ತಡೆಗಟ್ಟಲು ವಕ್ಫ್ ಮಂಡಳಿ ಮನವಿ

Update: 2020-03-19 20:09 IST

ಮಂಗಳೂರು, ಮಾ.19: ರಾಜ್ಯದ ಪ್ರತಿಯೊಂದು ಜಿಲ್ಲೆಯ ಮಸೀದಿಯ ಆಡಳಿತ ಸಮಿತಿಯು ಕೊರೋನ ವೈರಸ್ ತಡೆಗಟ್ಟಲು ಸೂಕ್ತ ಕ್ರಮಗಳನ್ನು ಅನುಸರಿಸಬೇಕು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಡಾ. ಮುಹಮ್ಮದ್ ಯೂಸುಫ್ ಸಾಹೇಬ್ ಮನವಿ ಮಾಡಿದ್ದಾರೆ.

ಮಸೀದಿ ಮತ್ತು ಅದರ ಸುತ್ತಮುತ್ತಲು ಸ್ವಚ್ಚತೆಯನ್ನು ಕಾಪಾಡಬೇಕು, ಮಸೀದಿಗೆ ಪ್ರಾಥನೆಗೆ ಬರುವವರ ಅನುಕೂಲಕ್ಕಾಗಿ ವುಝೂ ಮಾಡುವ ಸ್ಥಳದಲ್ಲಿ ಸೋಪು ಅಥವಾ ಇನ್ನಿತರ ವಸ್ತುಗಳನ್ನು ಇಡಬೇಕು. ಮಸೀದಿಯ ಒಳಗೆ ಟೊಪ್ಪಿಮತ್ತು ಟವಲ್‌ಗಳನ್ನು ಇಡಬಾರದು. ಶುಚಿತ್ವದ ಎಲ್ಲಾ ತರಹದ ಮಾನದಂಡವನ್ನು ಕಾಪಾಡಬೇಕು. ದರ್ಗಾದ ಸುತ್ತಲು ಸ್ವಚ್ಛತೆಯನ್ನು ಕಾಪಾಡಬೇಕು ಮತ್ತು ಜನಸಂದಣಿಯನ್ನು ನಿಯಂತ್ರಿಸಿ ತಂಗುವುದನ್ನು ತಡೆಗಟ್ಟಬೇಕು. ದೈನಂದಿನ ನಮಾಝಿನ ಪ್ರಾರ್ಥನೆಯ ಸಮಯವನ್ನು ಕಡಿತಗೊಳಿಸಬೇಕು, ಶುಕ್ರವಾರದ ಜುಮಾ ಖುತ್ಬಾ ಮತ್ತು ನಮಾಝ್ ಅವಧಿಯನ್ನು ಕಡಿಮೆಗೊಳಿಸಬೇಕು, ಹತ್ತು ನಿಮಿಷ ಖುತ್ಬಾ ಮತ್ತು ಹತ್ತು ನಿಮಿಷ ನಮಾಝ್ ಹೀಗೆ 20 ನಿಮಿಷದೊಳಗೆ ಮುಗಿಸಬೇಕು. ಉರೂಸ್ ಮತ್ತು ಇಜ್‌ತಿಮಾಗಳಿಗೆ ಕನಿಷ್ಠ ಜನಗಳ ಕೂಡುವಿಕೆಗೆ ನಿಗಾ ವಹಿಸಬೇಕು. ರೋಗವನ್ನು ತಡೆಗಟ್ಟಲು ವಿಶೇಷ ಪ್ರಾರ್ಥನೆ ಮಾಡಬೇಕು. ಇದನ್ನು ದ.ಕ.ಜಿಲ್ಲಾ ವಕ್ಫ್ ಅಧಿಕಾರಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News