ಸಲಫಿ ಮದ್ರಸಗಳಿಗೆ ಬೇಸಿಗೆ ರಜೆ ಘೋಷಣೆ, 1ರಿಂದ 6ನೆ ತರಗತಿಯ ಪರೀಕ್ಷೆ ರದ್ದು
Update: 2020-03-19 20:14 IST
ಮಂಗಳೂರು, ಮಾ.19: ಕೊರೋನ ವೈರಸ್ ವ್ಯಾಪಕವಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಲಫಿ ಎಜುಕೇಶನ್ ಬೋರ್ಡ್ ಎಸ್‌ಕೆಎಸ್‌ಎಂ ಕೇಂದ್ರ ಸಮಿತಿಯೊಂದಿಗೆ ಸಮಾಲೋಚಿಸಿ 1ರಿಂದ 6ನೇ ತರಗತಿವರೆಗಿನ ಪರೀಕ್ಷೆಯನ್ನು ರದ್ದುಗೊಳಿಸಿದೆ. ಅಲ್ಲದೆ ಸಲಫಿ ಎಜುಕೇಶನ್ ಬೋರ್ಡ್‌ನ ಅಧೀನದಲ್ಲಿರುವ ಎಲ್ಲಾ ಮದ್ರಸಗಳಿಗೂ ಮಾ.23ರಿಂದ ಬೇಸಿಗೆ ರಜೆಯನ್ನು ಘೋಷಿಸಲಾಗಿದೆ.
7 ತರಗತಿಯ ಪಬ್ಲಿಕ್ ಪರೀಕ್ಷೆಯು ನಿಗದಿಯಾಗಿರುವಂತೆ ಎ.11,13 ಮತ್ತು 14 ರಂದು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.