85 ಕೋಟಿ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಂದ ಹೊರಗೆ
Update: 2020-03-19 21:10 IST
ಪ್ಯಾರಿಸ್, ಮಾ. 19: ನೋವೆಲ್-ಕೊರೋನವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, 85 ಕೋಟಿಗೂ ಅಧಿಕ ಯುವಜನರು ಅಥವಾ ಜಾಗತಿಕ ವಿದ್ಯಾರ್ಥಿ ಸಂಖ್ಯೆಯ ಅರ್ಧದಷ್ಟು ಮಂದಿ ತಮ್ಮ ಶಾಲೆ ಮತ್ತು ಕಾಲೇಜುಗಳಿಂದ ಹೊರಗಿದ್ದಾರೆ ಎಂದು ವಿಶ್ವಸಂಸ್ಥೆಯ ಶಿಕ್ಷಣ ಘಟಕ ಯುನೆಸ್ಕೊ ಬುಧವಾರ ತಿಳಿಸಿದೆ.
‘‘ಇದು ಅಭೂತಪೂರ್ವ ಸವಾಲು’’ ಎಂದಿರುವ ಯುನೆಸ್ಕೊ, 102 ದೇಶಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ ಹಾಗೂ ಇನ್ನೂ 11 ದೇಶಗಳಲ್ಲಿ ಆಂಶಿಕವಾಗಿ ಶಾಲೆ ಮತ್ತು ಕಾಲೇಜುಗಳು ಮುಚ್ಚಿವೆ ಎಂದಿದೆ. ಇನ್ನೂ ಹೆಚ್ಚಿನ ಶಾಲಾ-ಕಾಲೇಜುಗಳು ಮುಚ್ಚಲಿವೆ ಎಂಬುದಾಗಿಯೂ ಅದು ಭವಿಷ್ಯ ನುಡಿದಿದೆ.