ಕೊರೊನ ವೈರಸ್ ಪರಿಣಾಮ: ಇಂಡಿಗೊದ ಎಲ್ಲಾ ಸಿಬ್ಬಂದಿಯ ಸಂಬಳ ಕಡಿತ

Update: 2020-03-19 16:08 GMT

ಹೊಸದಿಲ್ಲಿ, ಮಾ.19: ಕೊರೊನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳ ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿರುವುದರಿಂದ ಎಲ್ಲಾ ಸಿಬಂದಿಗಳ ಸಂಬಳದಲ್ಲಿ ಕಡಿತ ಮಾಡಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೊಣೊಜಾಯ್ ದತ್ತ ಹೇಳಿದ್ದಾರೆ.

ಸಂಸ್ಥೆಯ ಆದಾಯದಲ್ಲಿ ತೀವ್ರ ಇಳಿಕೆಯಾಗಿದ್ದು ವಿಮಾನಯಾನ ಉದ್ಯಮ ಈಗ ಅಳಿವು ಉಳಿವಿನ ಪ್ರಶ್ನೆ ಎದುರಿಸುತ್ತಿದೆ. ಆದ್ದರಿಂದ ನನ್ನ ಸಂಬಳದಲ್ಲಿ 25% ಕಡಿತವಾಗಲಿದೆ. ಹಿರಿಯ ಉಪಾಧ್ಯಕ್ಷ ಹಾಗೂ ಇತರ ಉನ್ನತ ವ್ಯವಸ್ಥಾಪಕರ ಸಂಬಳದಲ್ಲಿ 20% ಕಡಿತ, ಕಾಕ್‌ಪಿಟ್ ಸಿಬ್ಬಂದಿಯ ಸಂಬಳದಲ್ಲಿ 15% ಕಡಿತವಾಗಲಿದೆ ಎಂದವರು ಹೇಳಿದ್ದಾರೆ.

ವಿಶ್ವದ ಬಹುತೇಕ ರಾಷ್ಟ್ರಗಳು ವಿಮಾನಪ್ರಯಾಣದ ಮೇಲೆ ನಿರ್ಬಂಧ ವಿಧಿಸಿರುವುದರಿಂದ ಹಲವು ವಿಮಾನಯಾನ ಸಂಸ್ಥೆಗಳ ಆದಾಯದಲ್ಲಿ ತೀವ್ರ ಇಳಿಕೆಯಾಗಿದೆ. ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಏರಿಂಡಿಯಾ ಸಂಸ್ಥೆಯೂ ಸಿಬ್ಬಂದಿಯ ಸಂಬಳದಲ್ಲಿ 5% ಕಡಿತ ಮಾಡಿದೆ. ಎಮಿರೇಟ್ಸ್ ಗ್ರೂಫ್ ಸಂಸ್ಥೆ ಸಂಬಳರಹಿತ ರಜೆ ಪಡೆಯುವಂತೆ ಸಿಬಂದಿಗಳಿಗೆ ಸೂಚಿಸಿದೆ. ಹಲವು ಜಾಗತಿಕ ವಿಮಾನಯಾನ ಸಂಸ್ಥೆಗಳೂ ಸಿಬಂದಿಗಳನ್ನು ವೇತನ ರಹಿತ ರಜೆಯ ಮೇಲೆ ಕಳುಹಿಸಲು ನಿರ್ಧರಿಸಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News