168 ರೈಲುಗಳ ಸಂಚಾರ ರದ್ದು: ರೈಲ್ವೆ ಘೋಷಣೆ

Update: 2020-03-19 17:09 GMT

ಹೊಸದಿಲ್ಲಿ, ಮಾ. 19: ಕೊರೋನ ವೈರಸ್ ಸೋಂಕಿನ ಭೀತಿಯಿಂದ ದೇಶದ ವಿವಿಧ ವಲಯಗಳ 168 ರೈಲುಗಳನ್ನು ರದ್ದುಗೊಳಿಸಿರುವುದಾಗಿ ಭಾರತೀಯ ರೈಲ್ವೆ ಗುರುವಾರ ಘೋಷಿಸಿದೆ. ಆದರೆ, ಟಿಕೆಟ್ ಮುಂಗಡ ಕಾಯ್ದಿರಿಸಿದವರ ಹಣವನ್ನು ಮರು ಪಾವತಿಸಲಾಗುವುದು ಎಂದು ರೈಲ್ವೆ ಭರವಸೆ ನೀಡಿದೆ. ಅಲ್ಲದೆ, ಟಿಕೆಟ್ ರದ್ದುಗೊಳಿಸುವ ಶುಲ್ಕವನ್ನು ಅನ್ವಯಿಸುವುದಿಲ್ಲ ಎಂದು ಹೇಳಿದೆ. ಮಾರ್ಚ್ 20ರಿಂದ 31ರ ವರೆಗೆ ಈ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಸಿಂಗಾಪುರದಿಂದ ಹಿಂದಿರುಗಿದ, ‘ಮನೆಯಲ್ಲೇ ಪ್ರತ್ಯೇಕವಾಗಿ ಇರಬೇಕು’ ಎಂದು ಕೈಯಲ್ಲಿ ಮುದ್ರೆ ಹೊಂದಿದ್ದ ಆರು ಮಂದಿಯನ್ನು ಮುಂಬೈಯ ಬೋರಿವಿಲ್ಲಿ ರೈಲು ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ಕೆಳಗೆ ಇಳಿಸಲಾಗಿದೆ.

ಮುಂಬೈ ಸೆಂಟ್ರಲ್‌ನಿಂದ ವಡೋದರದತ್ತ ಸಂಚರಿಸುತ್ತಿದ್ದ ಸೌರಾಷ್ಟ್ರ ಎಕ್ಸ್‌ಪ್ರೆಸ್‌ನಿಂದ ಈ ಆರು ಮಂದಿಯನ್ನು ಕೆಳಗೆ ಇಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News