×
Ad

​ಕೊರೊನಾ ವೈರಸ್ ಭೀತಿ ಹಿನ್ನೆಲೆ ; ಸರಕಾರಿ ಸೇವೆ ಭಾಗಶ: ಸ್ಥಗಿತ

Update: 2020-03-20 20:13 IST

ಉಡುಪಿ, ಮಾ.20: ಕೊರೋನ ವೈರಾಣು ವ್ಯಕ್ತಿಗೆ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ, ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿಡ್-19 ರೆಗ್ಯೂಲೇಷನ್ಸ್-2020ರ ನಿಯಮ 12ರಡಿ ಹಾಗೂ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಆ್ಯಕ್ಟ್ 2005ರ ಕಲಂ 24 (ಎ), (ಬಿ), 30 (2)ರಡಿಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಈ ಕೆಳಕಂಡ ಸೇವೆಗಳನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

ಸ್ಥಗಿತಗೊಂಡ ಸೇವೆಗಳು: ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯ ಆಧಾರ್ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳು, ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೀಡಲಾಗುತ್ತಿರುವ ಹೊಸ ವಾಹನ ಚಾಲನಾ ರಹದಾರಿ, ಕಲಿಯುವವರ ಪರವಾನಿಗೆ ನೋಂದಣಿ (ಎ.15 ರವರೆಗೆ ಸಿಂಧುತ್ವ ಹೊಂದಿರುವ ಕಲಿಕಾ ಚಾಲನಾ ಅನುಜ್ಞಾ ಪತ್ರಗಳ ಅ್ಯರ್ಥಿಗಳಿಗೆ ಮಾತ್ರ ವಾಹನಾ ಚಾಲನಾ ಅನುಜ್ಞಾ ಪತ್ರಗಳಿಗೆ ಪರೀಕ್ಷೆಗೆ ಹಾಜರಾಗಲು ಈ ನಿರ್ಬಂಧ ಅನ್ವಯಿಸುವುದಿಲ್ಲ), ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಪಂ ವ್ಯಾಪ್ತಿಗಳಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳು (ಸಾರ್ವಜನಿಕ ಹರಾಜುಗಳು, ಗ್ರಾಮಸಭೆ, ಇತರ ಲೈಸೆನ್ಸ್ ನೀಡುವಿಕೆ ಸೇವೆಗಳು), ಸರಕಾರಿ ಸಂಘಗಳ ಉಪನಿಬಂಧಕರು ಹಾಗೂ ಸಹಕಾರ ಸಂಗಳ ಸಹಾಯಕ ಉಪನಿಬಂಧಕರು, ಸಹಕಾರ ಇಲಾಖೆಗೆ ಸಂಬಂಧಿಸಿ ದಂತೆ ನೀಡಲಾಗುವ ಸೇವೆಗಳು (ಬ್ಯಾಂಕಿಂಗ್ ಹೊರತುಪಡಿಸಿ).

ಕೃಷಿ/ ತೋಟಗಾರಿಕೆ / ಮೀನುಗಾರಿಕೆ ಇಲಾಖೆಯಲ್ಲಿನ ವಿವಿಧ ಸೇವೆಗಳು (ರೈತ ಆತ್ಮಹತ್ಯೆ, ರೈತರ ಆಕಸ್ಮಿಕ ಮರಣಗಳು ಹಾಗೂ ಇತರೆ ತುರ್ತು ವಿಷಯ ಗಳನ್ನು ಹೊರತುಪಡಿಸಿ), ಸಮಾಜ ಕಲ್ಯಾಣ ಇಲಾಖೆ /ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ/ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಅಧೀನದಲ್ಲಿ ಬರುವ ನಿಗಮ ಮಂಡಳಿಗಳ ಸೇವೆಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕನ್ನಡ -ಸಂಸ್ಕೃತಿ ಇಲಾಖೆಯ ಸೇವೆಗಳು ಸ್ಥಗಿತಗೊಳ್ಳಲಿವೆ.

ಸ್ಥಗಿತದ ಆದೇಶ ಅನ್ವಯವಾಗದ ಸೇವೆಗಳು: ಬ್ಯಾಂಕ್, ಅಂಚೆಕಚೇರಿ, ಪೊಲೀಸ್ ಸೇವೆಗಳು, ಅಗ್ನಿಶಾಮಕ ಸೇವೆಗಳು, ದೂರವಾಣಿ ಸೇವೆಗಳು, ಇಂಟರ್‌ನೆಟ್ ಸೇವೆಗಳು, ಕೆ.ಎಸ್.ಆರ್.ಟಿ.ಸಿ, ಸಾರಿಗೆ ಸೇವೆಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸೇವೆಗಳು, ಸ್ವಚ್ಚತೆ ಕಾರ್ಯಕ್ರಮ ಗಳು, ಕುಡಿಯುವ ನೀರು, ವಿದ್ಯುಚ್ಫಕ್ತಿ ಪೂರೈಕೆ, ಒಳಚರಂಡಿ ವ್ಯವಸ್ಥೆ, ಅಂಗಡಿಗಳು, ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಶವ ಸಂಸ್ಕಾರ ಇತ್ಯಾದಿ ಸೇವೆಗಳು ಹಾಗೂ ತುರ್ತು ಸೇವೆಗಳಿಗೆ ಸ್ಥಗಿತದ ಆದೇಶ ಅನ್ವಯವಾಗುವುದಿಲ್ಲ.

ಬ್ಯಾಂಕ್, ಅಂಚೆಕಚೇರಿ, ಪೊಲೀಸ್ ಸೇವೆಗಳು, ಅಗ್ನಿಶಾಮಕ ಸೇವೆಗಳು, ದೂರವಾಣಿ ಸೇವೆಗಳು, ಇಂಟರ್‌ನೆಟ್ ಸೇವೆಗಳು, ಕೆ.ಎಸ್.ಆರ್.ಟಿ.ಸಿ, ಸಾರಿಗೆ ಸೇವೆಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸೇವೆಗಳು, ಸ್ವಚ್ಚತೆ ಕಾರ್ಯಕ್ರಮ ಗಳು, ಕುಡಿಯುವ ನೀರು, ವಿದ್ಯುಚ್ಫಕ್ತಿ ಪೂರೈಕೆ, ಒಳಚರಂಡಿ ವ್ಯವಸ್ಥೆ, ಅಂಗಡಿಗಳು, ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಶವ ಸಂಸ್ಕಾರ ಇತ್ಯಾದಿ ಸೇವೆಗಳು ಹಾಗೂ ತುರ್ತು ಸೇವೆಗಳಿಗೆ ಸ್ಥಗಿತದ ಆದೇಶ ಅನ್ವಯವಾಗುವುದಿಲ್ಲ. ಮೇಲಿನ ಈ ಎಲ್ಲಾ ಸೇವೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದರೂ ಸಹ ಈ ಕಚೇರಿಗಳಿಗೆ ರಜೆ ಘೋಷಣೆ ಮಾಡಿರುವುದಿಲ್ಲ ಹಾಗೂ ಸಂಬಂಧಿ ಸಿದ ಎಲ್ಲಾ ಅಧಿಕಾರಿ/ಸಿಬ್ಬಂದಿ ವರ್ಗದವರು ಎಂದಿನಂತೆ ಕಚೇರಿಯಲ್ಲಿ ಲ್ಯ ಇರಬೇಕು. ಅನಧಿಕೃತ ಗೈರು ಹಾಜರಿ ಅಥವಾ ಅನಧಿಕೃತವಾಗಿ ಕಚೇರಿಯನ್ನು ತೆರೆಯದಿದ್ದಲ್ಲಿ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು.

ಮೇಲಿನ ಈ ಎಲ್ಲಾ ಸೇವೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದರೂ ಸಹ ಈ ಕಚೇರಿಗಳಿಗೆ ರಜೆ ಘೋಷಣೆ ಮಾಡಿರುವುದಿಲ್ಲ ಹಾಗೂ ಸಂಬಂಧಿ ಸಿದ ಎಲ್ಲಾ ಅಧಿಕಾರಿ/ಸಿಬ್ಬಂದಿ ವರ್ಗದವರು ಎಂದಿನಂತೆ ಕಚೇರಿಯಲ್ಲಿ ಲ್ಯ ಇರಬೇಕು. ಅನಧಿಕೃತ ಗೈರು ಹಾಜರಿ ಅಥವಾ ಅನಧಿಕೃತವಾಗಿ ಕಚೇರಿಯನ್ನು ತೆರೆಯದಿದ್ದಲ್ಲಿ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಸರಕಾರಿ ಕಚೇರಿಗಳಿಗೆ (ಜಿಲ್ಲಾಧಿಕಾರಿಗಳು/ಉಪವಿಬಾಗಾಧಿಕಾರಿಗಳು/ ತಹಶೀಲ್ದಾರರು/ ಸ್ಥಳೀಯ ಸಂಸ್ಥೆಗಳು/ ಇತರೆ ಕಚೇರಿಗಳು ಸೇರಿದಂತೆ) ಅಥವಾ ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರು ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದ್ದು, ಈ ನಿರ್ಬಂಧ ತುರ್ತು ಸಂದರ್ದಲ್ಲಿ ಹಾಗೂ ತುರ್ತು ವಿಷಯಗಳಿಗೆ ಅನ್ವಯವಾಗುವುದಿಲ್ಲ.

ಮೇಲಿನ ಎಲ್ಲಾ ಸೇವೆಗಳಲ್ಲಿ ಸರಕಾರ ಹಾಗೂ ನ್ಯಾಯಾಲಯಗಳಿಗೆ ಸಂಬಂಧಿಸಿದ ಪ್ರಕರಣಗಳು ಮತ್ತು ಅತಿ ತುರ್ತು ಪ್ರಕರಣಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News