×
Ad

ಕೋವಿಡ್-19: ಅರಿವು, ಜಾಗೃತಿ ಕಾರ್ಯಕ್ರಮ

Update: 2020-03-20 20:26 IST

ಉಡುಪಿ, ಮಾ.20: ಬೊಮ್ಮರಬೆಟ್ಟು ಗ್ರಾಪಂನ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯಡ್ಕ ಹಾಗೂ ಹಿರಿಯಡ್ಕ ಅರಕ್ಷಕರ ಠಾಣೆ ಇವುಗಳ ಜಂಟಿ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನೋವೆಲ್ ಕೋವಿಡ್-19 ವೈರಸ್ ಕುರಿತಂತೆ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಸಮನ್ವಯ ಮಿತಿ ರಚನೆ ಹಮ್ಮಿಕೊಳ್ಳಲಾಗಿತ್ತು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸತ್ಯಶಂಕರ್ ಅವರು ಕೋವಿಡ್-19 ರೋಗದ ಕುರಿತಂತೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕೊರೋನ ರೋಗದ ಕುರಿತು ಕರಪತ್ರವನ್ನು ಬಿಡುಗಡೆ ಮಾಡಲಾಯಿತು.

ವಿದೇಶದಿಂದ ಬಂದವರು ತಮ್ಮ ಮನೆಗಳಲ್ಲೇ ನಿರ್ಬಂಧಗಳಲ್ಲಿ ಇರುವ ಬಗ್ಗೆ ತಿಳಿಸಿದ್ದು, ದೈನಂದಿನ ವರದಿಗಳನ್ನು ನೀಡುಲಾಗುತ್ತಿದೆ. ಗ್ರಾಪಂ, ಪೋಲಿಸ್ ಇಲಾಖೆ ಒಟ್ಟಿಗೆ ಸೇರಿ ಜವಾಬ್ದಾರಿ ನಿಬಾಯಿಸುವ ನಿಟ್ಟಿನಲ್ಲಿ ಸಮನ್ವಯ ಸಮಿತಿಯನ್ನು ರಚನೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅರಕ್ಷಕ ಠಾಣಾಧಿಕಾರಿ ಸುಧಾಕರ್, ಗ್ರಾಪಂ ಅಧ್ಯಕ್ಷೆ ಸವಿತಾ ನಾಯಕ್, ಉಪಾಧ್ಯಕ್ಷ ಹರೀಶ್ ಸಾಲಿಯಾನ್, ಗ್ರಾಪಂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ಯಾಮಲ ಹಾಗೂ ಅರ್ಚನ ಕೈತೊಳೆಯುವ ಬಗ್ಗೆ ಪ್ರಾತ್ಯಕ್ಷತೆ ನೀಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವಿಜಯಬಾಯಿ ಕೆ. ಸ್ವಾಗತಿಸಿದರು. ಕಿರಿಯ ಆರೋಗ್ಯ ಸಹಾಯಕ ಮಧು ಕೆ.ಎನ್. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News