ಪ್ರತ್ಯೇಕ ರಸ್ತೆ ಅಪಘಾತ: ವಿದ್ಯಾರ್ಥಿ ಸಹಿತ ಇಬ್ಬರು ಮೃತ್ಯು
Update: 2020-03-20 20:30 IST
ಮಂಗಳೂರು, ಮಾ.20: ಕದ್ರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿ ಸಹಿತ ಇಬ್ಬರು ಮೃತಪಟ್ಟಿದ್ದಾರೆ.
ನಗರದ ಹೊರ ವಲಯದ ಬಿಕರ್ನಕಟ್ಟೆ ಸಮೀಪದ ಮೈದಾನ ಬಳಿ ಗುರುವಾರ ನಡೆದ ರಸ್ತೆ ಅಪಘಾತದಲ್ಲಿ ಮೂಡುಬಿದಿರೆಯ ಎಂಐಟಿ ಕಾಲೇಜಿನ ಎರಡನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರಣ್ವಿತ್ ಆಳ್ವ (19) ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಪುತ್ತೂರು ತಾಲೂಕಿನ ಬಡಗನ್ನೂರು ಪೇರಾಲ್ ನಿವಾಸಿ ಪುತ್ತೂರಿನ ಏಳ್ಮುಡಿಯ ಆಳ್ವಾಸ್ ಕನ್‌ಸ್ಟ್ರಕ್ಷನ್ ಮಾಲಕ ಚಂದ್ರಶೇಖರ ಆಳ್ವರ ಪುತ್ರ ಪ್ರಣ್ವಿತ್ ಆಳ್ವ ಗುರುವಾರ ಬಿಕರ್ನಕಟ್ಟೆಯಿಂದ ಜೋಡುಕಟ್ಟೆ ಕಡೆಗೆ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ವಿದ್ಯುತ್ ಕಂಬಕ್ಕೆ ಬಡಿದು ಬಳಿಕ ಅಲ್ಲೇ ನಿಲ್ಲಿಸಿದ್ದ ಲಾರಿಗೆ ಢಿಕ್ಕಿ ಹೊಡೆದಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಪ್ರಣ್ವಿತ್ ಆಳ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.