×
Ad

ಕೊರೋನ ವೈರಸ್: ದ.ಕ.ಜಿಲ್ಲೆಯಲ್ಲಿ ಈವರೆಗೆ 36,951 ಮಂದಿಯ ಸ್ಕ್ರೀನಿಂಗ್

Update: 2020-03-20 20:32 IST

ಮಂಗಳೂರು, ಮಾ.20: ಕೊರೋನ ವೈರಸ್ ಭೀತಿಯ ಹಿನ್ನಲೆಯಲ್ಲಿ ವಿದೇಶದಿಂದ ಆಗಮಿಸುವ ಪ್ರಯಾಣಿಕರ ಆರೋಗ್ಯ ತಪಾಸಣೆ ಕಾರ್ಯವನ್ನು ತೀವ್ರಗೊಳಿಸಲಾಗಿದ್ದು, ಶುಕ್ರವಾರ ದ.ಕ.ಜಿಲ್ಲೆಯಲ್ಲಿ 630 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. ಇದರೊಂದಿಗೆ ಈವರೆಗೆ 36,951 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ 1,654 ಮಂದಿಯನ್ನು ಅವರ ಮನೆಯಲ್ಲೇ ನಿಗಾದಲ್ಲಿರಿಸಲಾಗಿದೆ. ಇಎಸ್‌ಐ ಆಸ್ಪತ್ರ್ರೆಯಲ್ಲಿ 14 ಮಂದಿಯನ್ನು ವಿಶೇಷ ನಿಗಾದಲ್ಲಿರಿಸಲಾಗಿದೆ. ಶುಕ್ರವಾರ ಮತ್ತೆ 9 ಮಂದಿಯ ಗಂಟಲಿನ ದ್ರವವನ್ನು ಸ್ಯಾಂಪಲ್ ಟೆಸ್ಟ್ ಗೆ ಹಾಸನದ ಆಸ್ಪತ್ರೆಗೆ ಕಳಿಸಲಾಗಿದೆ. ಈ ಹಿಂದೆ ಕಳುಹಿಸಿದ ಸ್ಯಾಂಪಲ್ ಗಳ ಪೈಕಿ 17 ಮಂದಿಯ ಸ್ಯಾಂಪಲ್ ವಾಪಸ್ ಬಂದಿದ್ದು, ಅವೆಲ್ಲದ ರಿಪೋರ್ಟ್ ನೆಗೆಟಿವ್ ಆಗಿದೆ. ಶುಕ್ರವಾರ 5 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.

ಮನೆಯಲ್ಲೇ ಇರಿ

ವಿದೇಶದಿಂದ ಊರಿಗೆ ಬಂದವರು ಎಲ್ಲಿಗೂ ಹೋಗದೆ ಮನೆಯಲ್ಲೇ ಇರುವಂತೆ ಮನವಿ ಮಾಡಿರುವ ಡಿಸಿ, ಈವರೆಗೆ ಆಶಾ ಕಾರ್ಯಕತೆರ್ಯರು 1,04,151 ಮನೆಗಳಿಗೆ ಭೇಟಿ ನೀಡಿ 4,00,148 ಮಂದಿಗೆ ಕೊರೋನ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News