×
Ad

ಕೊರೋನ ಎಫೆಕ್ಟ್: ಮಣಿಪಾಲ ಕೆಎಂಸಿಯಲ್ಲಿ ಸೋಮವಾರದಿಂದ ತುರ್ತು ಚಿಕಿತ್ಸೆ ಮಾತ್ರ

Update: 2020-03-20 21:12 IST

ಮಣಿಪಾಲ, ಮಾ.20: ನೋವೆಲ್ ಕೊರೋನ ವೈರಸ್ (ಕೋವಿಡ್-19) ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಆಡಳಿತ ಮಂಡಳಿಯು ಮಾ.23ರ ಸೋಮವಾರದಿಂದ ಅನ್ವಯವಾಗುವಂತೆ ವೈದ್ಯಕೀಯ ತುರ್ತು ಚಿಕಿತ್ಸೆ ಮತ್ತು ಎಮರ್ಜೆನ್ಸಿ  ಚಿಕಿತ್ಸೆ ಮಾತ್ರ ನೀಡಲು ನಿರ್ಧರಿಸಿದೆ.

ಹೀಗಾಗಿ ಹೊರರೋಗಿ ವಿಭಾಗ ಸೋಮವಾರದಿಂದ ಇರುವುದಿಲ್ಲ. ಬದಲು ಆಸ್ಪತ್ರೆಗೆ ಬರುವ ಪ್ರತಿಯೊಬ್ಬರನ್ನು ಹೊರಭಾಗದಲ್ಲಿ ಹಾಕಿರುವ ತಾತ್ಕಾಲಿಕ ತಪಾಸಣಾ ಕೇಂದ್ರದಲ್ಲಿ ಪರೀಕ್ಷಿಸಿ ನಂತರ ಮುಂದಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಆಸ್ಪತ್ರೆಯ ಸಂಬಂಧಿತ ವಿಭಾಗದ ವ್ಯೆದ್ಯರಿಂದ ಚಿಕಿತ್ಸೆಗೆ ಅವಕಾಶ ನೀಡಲಾಗುವುದು. ಅತ್ಯವಶ್ಯ ಚಿಕಿತ್ಸೆಯ ಅಗತ್ಯ ಇರದೆ ಇರುವ ರೋಗಿಗಳನ್ನು ಮುಂದಿನ ದಿನಾಂಕದಲ್ಲಿ ಆಸ್ಪತ್ರೆಗೆ ಬರುವಂತೆ ತಿಳಿಸಲಾಗುವುದು.

ನಿಗಾ ಘಟಕಗಳಿಗೆ (ಐಸಿಯು) ಪ್ರವೇಶ ಮತ್ತು ಶಸ್ತ್ರಚಿಕಿತ್ಸೆಯ ನಂತರದ ತೀವ್ರ ನಿಗಾ ಘಟಕಗಳ ಪ್ರವೇಶದ ನಿರ್ಬಂಧ ಮುಂದುವರಿಸಲಿದೆ. ಆದರೂ ತುರ್ತು ಚಿಕಿತ್ಸಾ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News