×
Ad

ಕೊರೋನವೈರಸ್‌ಗೆ ಅಮೆರಿಕದಲ್ಲಿ 154 ಬಲಿ

Update: 2020-03-20 21:14 IST

ವಾಶಿಂಗ್ಟನ್, ಮಾ. 20: ಅಮೆರಿಕದಲ್ಲಿ ಗುರುವಾರದವರೆಗೆ ಕೊರೋನವೈರಸ್‌ನಿಂದಾಗಿ 154 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 10,755 ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯ ನಿರ್ವಹಿಸಿಕೊಂಡು ಬಂದಿರುವ ದಾಖಲೆ ಹೇಳಿದೆ.

ಈಗ ಕೊರೋನವೈರಸ್‌ನಿಂದಾಗಿ ಸಂಭವಿಸಿದ ಪ್ರಾಣ ಹಾನಿ ಪಟ್ಟಿಯಲ್ಲಿ ಅಮೆರಿಕ ಆರನೇ ಸ್ಥಾನದಲ್ಲಿದೆ. ಪಟ್ಟಿಯಲ್ಲಿ ಅಮೆರಿಕದ ಎದುರು ಚೀನಾ, ಇಟಲಿ, ಇರಾನ್, ಸ್ಪೇನ್ ಮತ್ತು ಜರ್ಮನಿಯಿದ್ದರೆ, ಹಿಂದೆ ಫ್ರಾನ್ಸ್ ಮತ್ತು ದಕ್ಷಿಣ ಕೊರಿಯವಿದೆ.

ಪರೀಕ್ಷೆಗೊಳಗಾದವರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಅಮೆರಿಕದಲ್ಲಿ ಕೊರೋನವೈರಸ್ ಪೀಡಿತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಬಹುದು ಎಂದು ವಿಶ್ವವಿದ್ಯಾನಿಲಯದ ದಾಖಲೆ ಹೇಳಿದೆ.

ಜಾಗತಿಕ ಮಟ್ಟದಲ್ಲಿ 9,325 ಸಾವು

ಜಾಗತಿಕ ಮಟ್ಟದಲ್ಲಿ ಕೊರೋನವೈರಸ್‌ನಿಂದಾಗಿ 9,325 ಸಾವುಗಳು ಸಂಭವಿಸಿವೆ ಹಾಗೂ 2,29,390 ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ದಾಖಲೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News