×
Ad

ಕಡಬ: ಹೊಳೆಯಲ್ಲಿ ಮುಳುಗಿ ಯುವಕರಿಬ್ಬರು ಮೃತ್ಯು

Update: 2020-03-20 21:43 IST

ಕಡಬ, ಮಾ.20. ಸ್ನಾನಕ್ಕೆಂದು ಹೊಳೆಗೆ ಇಳಿದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಸಂಜೆ ಇಚಿಲಂಪಾಡಿಯಲ್ಲಿ ನಡೆದಿದೆ.

ಮೃತಪಟ್ಟ ಯುವಕರನ್ನು ಇಚಿಲಂಪಾಡಿ ಗ್ರಾಮದ ಕಲ್ಯ ನಿವಾಸಿಗಳಾದ ಸುಂದರ ಗೌಡ ಎಂಬವರ ಪುತ್ರ ಗುರುನಂದನ್(23) ಹಾಗೂ ಸುಬ್ರಾಯ ಎಂಬವರ ಪುತ್ರ ವೆಂಕಟೇಶ್ (22) ಎಂದು ಗುರುತಿಸಲಾಗಿದೆ.

ಶುಕ್ರವಾರ ಸಂಜೆ ಸಹೋದರಿಯರ ಜೊತೆಗೂಡಿ ಐವರು ಇಚಿಲಂಪಾಡಿ ಸಮೀಪ ಕೆಂಪುಹೊಳೆಗೆ ಸ್ನಾನಕ್ಕೆಂದು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಕೆಂಪುಹೊಳೆಯ ಗಯದಲ್ಲಿ ಗುರುನಂದನ್ ಮುಳುಗುತ್ತಿದ್ದ ವೇಳೆ ರಕ್ಷಿಸಲೆಂದು ನೀರಿಗಿಳಿದ ವೆಂಕಟೇಶ್ ಸಹ ನೀರಿನಲ್ಲಿ‌ ಮುಳುಗಿದ್ದು, ತಕ್ಷಣವೇ ಉಳಿದವರು ಬೊಬ್ಬೆ ಹಾಕಿ ಮನೆಗೆ ಆಗಮಿಸಿ ವಿಷಯ ತಿಳಿಸಿದ್ದಾರೆ. ಊರವರು ಆಗಮಿಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ಶುಕ್ರವಾರ ರಾತ್ರಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News