×
Ad

ಉಡುಪಿ: ಕೃಷ್ಣ ಮಠ ಸಂಪೂರ್ಣ ಬಂದ್

Update: 2020-03-20 21:59 IST

ಉಡುಪಿ, ಮಾ.20: ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು, ಪ್ರವಚನ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು ನಿರ್ಧರಿಸಿದ್ದಾರೆ.

ಕೇಂದ್ರ, ರಾಜ್ಯ ಸರಕಾರಗಳು ಹಾಗೂ ಜಿಲ್ಲಾಧಿಕಾರಿಯವರ ಆದೇಶದಂತೆ ಯಾವುದೇ ಕಾರ್ಯಕ್ರಮಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ. ಕೃಷ್ಣ ಮಠದಲ್ಲಿ ಪ್ರತಿದಿನ ನಡೆಯುವ ದೈನಂದಿನ ಪೂಜೆ, ಪುರಸ್ಕಾರ, ಸಂಪ್ರದಾಯ ಗಳು ಎಂದಿನಂತೆ ನಡೆಯಲಿದ್ದು, ಭಕ್ತರು ಇಲ್ಲಿಗೆ ಭೇಟಿ ನೀಡದೇ ಮನೆಯಲ್ಲೇ ಇದ್ದು ಕೃಷ್ಣನನ್ನು ಪ್ರಾರ್ಥಿಸುವಂತೆ ಅವರು ಮನವಿ ಮಾಡಿದರು.

ಮಠದಲ್ಲಿ ಭಕ್ತರು ಮಠದೊಳಗೆ ಬರುವ ಹಾಗೂ ಹೊರಹೋಗುವ ಗೇಟ್‌ಗಳನ್ನು ಮುಚ್ಚಲಾಗಿದೆ. ರಥಬೀದಿಯ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಮಠದಲ್ಲಿ ಪ್ರತಿದಿನ ನಡೆಯುವ ರಥೋತ್ಸವ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಅನ್ನದಾನವನ್ನು ಸಹ ನಿಲ್ಲಿಸಲಾಗಿದ್ದು, ಉಡುಪಿ ಭೇಟಿ ಗೆಂದು ಬಂದ, ಬರುತ್ತಿರುವ ಪ್ರವಾಸಿಗರು ವಾಪಸಾಗುತಿದ್ದಾರೆ.

ಜಿಲ್ಲಾಧಿಕಾರಿಗಳು ನಿನ್ನೆ ನೀಡಿದ ಸೂಚನೆಯಂತೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News