×
Ad

10 ವರ್ಷಕ್ಕಾಗುವಷ್ಟು ಟಾಯ್ಲೆಟ್ ಪೇಪರ್ ಇದೆ: ನೆದರ್‌ಲ್ಯಾಂಡ್ಸ್ ಪ್ರಧಾನಿ

Update: 2020-03-20 22:00 IST

ಆ್ಯಮ್‌ಸ್ಟರ್‌ಡಾಂ (ನೆದರ್‌ಲ್ಯಾಂಡ್ಸ್), ಮಾ. 20: ಟಾಯ್ಲೆಟ್ ಪೇಪರ್‌ನ ಕೊರತೆಯಿಲ್ಲ ಎಂದು ಹೇಳುವ ಮೂಲಕ ಜನರಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ನೆದರ್‌ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರೂಟ್ ಗುರುವಾರ ಮಾಡಿದ್ದಾರೆ.

ಸೂಪರ್‌ ಮಾರ್ಕೆಟೊಂದರ ಕೆಲಸಗಾರರಲ್ಲಿ ಧೈರ್ಯ ತುಂಬುವ ಪ್ರಯತ್ನವಾಗಿ ಅಲ್ಲಿಗೆ ಹೋಗಿದ್ದ ಪ್ರಧಾನಿ, ಅಲ್ಲಿನ ಗ್ರಾಹಕರೊಬ್ಬರೊಂದಿಗೆ ಮಾತನಾಡುತ್ತಾ, ‘‘ಹೌದು, ನನ್ನಲ್ಲಿ (ಟಾಯಿಲೆಟ್ ಪೇಪರ್) ಸಾಕಷ್ಟಿದೆ’’ ಎಂದರು.

‘‘ಇಡೀ ದೇಶದಲ್ಲಿ 10 ವರ್ಷಗಳಿಗಾಗುವಷ್ಟು ಟಾಯಿಲೆಟ್ ಪೇಪರ್ ಇದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News