ಕೊರೋನಾ ಭೀತಿ: ಮೂರು ದಿನ ಸೆಲೂನ್ ಬಂದ್
Update: 2020-03-20 22:13 IST
ಶಿರ್ವ, ಮಾ.20: ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆ ಯಾದ್ಯಂತ ಮಾ.22, 23 ಮತ್ತು 24ರಂದು ಸೆಲೂನ್ ಬಂದ್ ಮಾಡಲು ಉಡುಪಿ ಜಿಲ್ಲಾ ಪರಿಯಾಳ ಮಾಜ ಸುಧಾರಕ ಸಂಘ ನಿರ್ಧರಿಸಿದೆ.
ಕ್ಷೌರಿಕರ ಆರೋಗ್ಯದ ದೃಷ್ಟಿಯಿಂದ ಪ್ರಧಾನಿಯವರ ಜನತಾ ಕರ್ಫ್ಯೂ ಮನವಿಯನ್ನು ಪಾಲಿಸಿ, ನಮ್ಮ ವೈಯುಕ್ತಿಕ ಆರೋಗ್ಯದ ಜೊತೆಗೆ ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸುವ ಉದ್ದೇಶದಿಂದ ಕರೋನಾ ತಡೆಗಟ್ಟಲು ಮೂರು ದಿನಗಳ ರಜೆ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಯು. ಶಂಕರ ಸಾಲಿಯಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.