×
Ad

ಕೊರೋನ ವೈರಸ್ ಭೀತಿ : ಸೆಲೂನ್, ಬ್ಯೂಟಿಪಾರ್ಲರ್‌ಗಳಿಗೆ ಸೂಚನೆ

Update: 2020-03-20 22:17 IST

ಉಡುಪಿ, ಮಾ.20: ಉಡುಪಿ ಜಿಲ್ಲೆಯ ಹೇರ್‌ಕಟ್ಟಿಂಗ್ ಶಾಪ್‌ಗಳು, ಬ್ಯೂಟಿಪಾರ್ಲರ್‌ಗಳು, ಸಾರಿ ಸೆಂಟರ್ಸ್‌ ಮತ್ತು ಇತರೆ ಹೆಚ್ಚು ಜನಸಂದಣಿ ಸೇರುವ ಅಂಗಡಿ ಮುಂಗಟ್ಟುಗಳು, ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಸೂಚಿಸಿರುವ ಕ್ರಮಗಳನ್ನು ಪಾಲಿಸು ವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಹೇರ್ ಕಟ್ಟಿಂಗ್ ಶಾಪ್‌ಗಳು ಮತ್ತು ಬ್ಯೂಟಿ ಪಾರ್ಲರ್‌ಗಳಲ್ಲಿ ಕಾರ್ಯ ನಿರ್ವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರತಿಯೊಬ್ಬ ಗ್ರಾಹಕರಿಗೂ ಪ್ರತ್ಯೇಕವಾಗಿ ಬಟ್ಟೆಗಳನ್ನು ಉಪಯೋಗಿಸಬೇಕು. ತಮ್ಮಲ್ಲಿರುವ ಪೀಠೋ ಪಕರಣಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ವೈಯಕ್ತಿಕ ಸ್ವಚ್ಛತೆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ಆಗಾಗ್ಗೆ ಸೋಪ್ ಬಳಸಿ ಹ್ಯಾಂಡ್ ವಾಶ್ ಮಾಡಬೇಕು. ಸ್ಯಾನಿಟೈಸರ್ ಬಳಸಬೇಕು.
ತಮ್ಮ ಶಾಪ್‌ಗಳಲ್ಲಿ ಹೆಚ್ಚಿನ ಜನಸಂದಣಿ ಸೇರದಂತೆ ನೋಡಿಕೊಳ್ಳಬೇಕು. ಗ್ರಾಹಕರನ್ನು ಮುಟ್ಟಿದ ನಂತರ ಕಣ್ಣು, ಮೂಗು, ಬಾಯಿಯನ್ನು ಮುಟ್ಟ ಬಾರದು. ಸಾರಿ ಸೆಂಟರ್‌ಗಳಲ್ಲಿ ಕಾರ್ಯನಿರ್ವಹಿಸುವವರು ಕೂಡ ಮಾಸ್ಕ್ ಧರಿಸಬೇಕು. ಗ್ರಾಹಕರಿಗೆ ಬಟ್ಟೆಯನ್ನು ಮುಟ್ಟುವ ಮೊದಲು ಸ್ಯಾನಿಟೈಸರ್ ಬಳಸಲು ವ್ಯವಸ್ಥೆ ವಾಡಬೇಕು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News