×
Ad

ನೀರು ಸರಬರಾಜಿನಲ್ಲಿ ಮಿತಿ

Update: 2020-03-20 22:24 IST

ಉಡುಪಿ, ಮಾ.20: ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಅಭಾವವನ್ನು ಪರಿಗಣಿಸಿ ನೀರು ಸರಬರಾಜು ಹಾದು ಹೋಗಲು ಮುಖ್ಯ ಕೊಳವೆ ಮಾರ್ಗದಲ್ಲಿ ಬರುವ ಗ್ರಾಪಂಗಳು ಹಾಲಿ ದಿನದ 24 ಗಂಟೆಯೂ ನೀರು ಬಳಕೆ ಮಾಡುತ್ತಿದ್ದು, ಈ ನೀರು ಸರಬರಾಜನ್ನು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ರುವಂತೆ ದಿನದ ಆರು ಗಂಟೆಗೆ ಮಿತಿಗೊಳಿಸಲಾಗಿದೆ.

ಅದರಂತೆ ಈ ಮಾರ್ಗದಲ್ಲಿ ಬಜೆ ಡ್ಯಾಂನಿಂದ ಮಣಿಪಾಲ ಜಿಎಸ್ ಎಲ್‌ಆರ್‌ವರೆಗೆ ಬರುವ ಎಲ್ಲ ಗ್ರಾಮಗಳಿಗೆ ಬೆಳಗ್ಗೆ 7 ಗಂಟೆಯಿಂದ ಅಪರಾಹ್ನ 1ಗಂಟೆಯವರೆಗೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದಂತೆ ನೀರಿನ ವೇಗ ಹಾಗೂ ಜಿಎಸ್‌ಎಲ್‌ಆರ್ ಮಟ್ಟ ಹೆಚ್ಚಿಸಲು ನೀರು ಸರಬರಾಜು ಗೇಟ್‌ವಾಲ್‌ಗಳನ್ನು ನಗರಸಭಾ ವತಿಯಿಂದ ಪಂಚಾಯತ್ ವ್ಯಾಪ್ತಿಯಲ್ಲಿ ಬಂದ್ ಮಾಡಲಾಗುವುದು ಎಂದು ಪೌರಾಯುಕ್ತರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News