×
Ad

ಕೊರೋನವೈರಸ್ ಬಗ್ಗೆ ಚೀನಾದಿಂದ ವೀಡಿಯೊ ಕಾನ್ಫರೆನ್ಸ್

Update: 2020-03-20 22:35 IST

ಬೀಜಿಂಗ್, ಮಾ. 20: ಕೊರೋನವೈರಸ್ ಸಾಂಕ್ರಾಮಿಕಕ್ಕೆ ಸಂಬಂಧಿಸಿ ಚೀನಾ ಶುಕ್ರವಾರ ಯುರೇಶ್ಯ ಮತ್ತು ದಕ್ಷಿಣ ಏಶ್ಯಗಳ ಕೆಲವು ದೇಶಗಳ ಪ್ರತಿನಿಧಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿದೆ.

ನೋವೆಲ್-ಕೊರೋನ ವೈರಸ್ ಸಾಂಕ್ರಾಮಿಕವನ್ನು ತಡೆಯುವುದು ಮತ್ತು ನಿಯಂತ್ರಿಸುವುದು ಹೇಗೆ ಎಂಬ ಬಗ್ಗೆ ಪ್ರತಿನಿಧಿಗಳು ವಿಚಾರವಿನಿಮಯ ನಡೆಸಿದರು.

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಸಹಕರಿಸಲು ಹಾಗೂ ತನ್ನ ಇತಿಮಿತಿಯೊಳಗೆ ಅದಕ್ಕೆ ನೆರವು ಮತ್ತು ಬೆಂಬಲ ನೀಡಲು ಚೀನಾ ಸಿದ್ಧವಿದೆ ಎಂದು ಭಾರತಕ್ಕೆ ಚೀನಾದ ರಾಯಭಾರಿ ಸುನ್ ವೀಡಾಂಗ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News