ಮನೆಯಲ್ಲೇ ನಮಾಝ್ ನಿರ್ವಹಿಸಲು ಬೇಕಲ್ ಉಸ್ತಾದ್ ಕರೆ
Update: 2020-03-21 20:36 IST
ಮಂಗಳೂರು, ಮಾ.21: ಕೊರೋನ ವೈರಸ್ ಭೀತಿಯಿಂದ ಮತ್ತು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದ ಮನವಿಯ ಮೇರೆಗೆ ಮಸೀದಿಗಳ ಬದಲು ಮನೆಯಲ್ಲೇ ನಮಾಝ್ ನಿರ್ವಹಿಸುವಂತೆ ಸಂಯುಕ್ತ ಖಾಝಿ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಕರೆ ನೀಡಿದ್ದಾರೆ.
ಕೊರೋನ ವೈರಸ್‌ಗೆ ಸಂಬಂಧಿಸಿ ಸರಕಾರದ ನಿರ್ದೇಶನಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ. ಹಾಗಾಗಿ ಸಾಮೂಹಿಕ ನಮಾಝ್ ಮಾಡುವವರು ಬಾಂಗ್ ಮೊಳಗಿದ ತಕ್ಷಣ ನಮಾಝ್ ನಿರ್ವಹಿಸಬೇಕು. ಪ್ರಾರ್ಥನೆಯನ್ನು ಚುಟುಕುಗೊಳಿಸಬೇಕು. ಇಂತಹ ಸಂದರ್ಭ ನಮಾಝ್ ನಿರ್ವಹಿಸಲು ಮಸೀದಿಗಳಿಗಿಂತ ಮನೆಯೇ ಉತ್ತಮ ಆಯ್ಕೆಯಾಗಿದೆ. ಪರಸ್ಪರ ಹೆಚ್ಚು ಬೆರೆಯದಿರುವ ಮೂಲಕ ವೈರಸ್ ಹರಡದಂತೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸೋಮವಾರ ಉಪವಾಸ: ರವಿವಾರ ಅಸ್ತಮಿಸಿದ ಸೋಮವಾರ ರಾತ್ರಿ ರಜಬ್ 27 ಆಗಲಿದ್ದು, ಮೆಹರಾಜ್‌ನ ಉಪವಾಸವನ್ನು ಸೋಮವಾರ ಆಚರಿಸಲು ಕರೆ ನೀಡಿರುವ ಬೇಕಲ ಉಸ್ತಾದ್ ಅಂದು ಕೊರೋನ ವೈರಸ್ ನಿಗ್ರಹಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಲು ಮನವಿ ಮಾಡಿದ್ದಾರೆ.