ಕೊರೋನವೈರಸ್: ವಿದೇಶಗಳಲ್ಲಿ ಅತಂತ್ರರಾಗಿರುವ ಪ್ರಜೆಗಳಿಗೆ ಅಸ್ಸಾಂ ಸರಕಾರದಿಂದ 2,000 ಡಾ.ನೆರವು

Update: 2020-03-21 15:44 GMT

ಗುವಾಹಟಿ, ಮಾ.21: ಕೊರೋನವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ವಿದೇಶಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ತನ್ನ ರಾಜ್ಯದ ನಿವಾಸಿಗಳಿಗೆ 2,000 ಡಾ. (ಸುಮಾರು 1.5 ಲ.ರೂ.)ಗಳ ಆರ್ಥಿಕ ನೆರವು ಒದಗಿಸುವುದಾಗಿ ಅಸ್ಸಾಂ ಸರಕಾರವು ಪ್ರಕಟಿಸಿದೆ.

ಅಲ್ಪಾವಧಿ ಕೋರ್ಸ್‌ಗಳಿಗೆಂದು ತೆರಳಿದ್ದ ಅಸ್ಸಾಮಿನ ಹಲವಾರು ವಿದ್ಯಾರ್ಥಿಗಳು ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಭಾರತಕ್ಕೆ ಪ್ರಯಾಣಿಸಲು ಅನುಮತಿ ದೊರೆಯುವವರೆಗೆ ಅವರ ಜೀವನ ನಿರ್ವಹಣೆಗಾಗಿ ತಲಾ 2,000 ಡಾ.ಗಳನ್ನು ವರ್ಗಾಯಿಸಲಾಗುವುದು ಎಂದು ತಿಳಿಸಿದ ಅಸ್ಸಾಮಿನ ಹಣಕಾಸು ಸಚಿವ ಹಿಮಂತ ಬಿಶ್ವ ಶರ್ಮಾ ಅವರು,ಅನಿವಾಸಿ ಭಾರತೀಯರು ಅಥವಾ ಸುದೀರ್ಘ ಅವಧಿಯಿಂದ ವಿದೇಶಗಳಲ್ಲಿ ದುಡಿಯುತ್ತಿರುವವರು ಅಥವಾ ಓದುತ್ತಿರುವವರು ಮತ್ತು ವಸತಿ ಸೌಲಭ್ಯವನ್ನು ಹೊಂದಿರುವವರಿಗೆ ಈ ಆರ್ಥಿಕ ನೆರವು ಅನ್ವಯಿಸುವುದಿಲ್ಲ. ಕಳೆದ 30 ದಿನಗಳಲ್ಲಿ ವಿದೇಶಗಳಿಗೆ ತೆರಳಿರುವ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ 2,000 ಡಾ.ಗಳನ್ನು ವರ್ಗಾಯಿಸಲಾಗುವುದು ಎಂದರು.

ಅಸ್ಸಾಮಿನಲ್ಲಿ ಕೊರೋನವೈರಸ್ ಸೋಂಕು ಪ್ರಕರಣ ವರದಿಯಾಗಿಲ್ಲ,ಆದರೆ ಸರಕಾರವು ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುತ್ತಿದೆ ಎಂದು ಶರ್ಮಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News