×
Ad

ಉಡುಪಿ ತೊರೆಯುತ್ತಿರುವ ವಲಸೆ ಕಾರ್ಮಿಕರು

Update: 2020-03-21 21:49 IST

ಉಡುಪಿ, ಮಾ.21: ಉಡುಪಿ ಜಿಲ್ಲೆಯಲ್ಲಿ ನೆಲೆಸಿರುವ ಉತ್ತರ ಕರ್ನಾಟಕ ಜಿಲ್ಲೆಗಳ ವಲಸೆ ಕಾರ್ಮಿಕರು ಕೊರೋನ ಭೀತಿಯಿಂದ ಇದೀಗ ತಂಡೋಪ ತಂಡವಾಗಿ ತಮ್ಮ ಊರುಗಳಿಗೆ ಹೊರಡಲು ಅಣಿಯಾಗಿದ್ದಾರೆ.

ಹಾವೇರಿ, ಬಾಗಲಕೋಟೆ, ಗದಗ, ಬಿಜಾಪುರ ಜಿಲ್ಲೆಗಳ ದಿನಕೂಲಿ ವಲಸೆ ಕಾರ್ಮಿಕರು ಉಡುಪಿ ಜಿಲ್ಲೆಯಲ್ಲಿ ಕೊರೋನ ವದಂತಿಯ ಹಿನ್ನೆಲೆಯಲ್ಲಿ ಇಂದು ತಮ್ಮ ಊರಿಗೆ ಹೋಗಲು ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ಗಳ ಟಿಕೆಟ್‌ಗಾಗಿ ಕಾಯುತ್ತಿದ್ದ ದೃಶ್ಯ ಕಂಡುಬಂದಿದೆ. ಹೆಂಗಸರು ಮಕ್ಕಳು ತಮ್ಮ ಕುಟುಂಬ ಸಮೇತರಾಗಿ ತಮ್ಮ ಜಿಲ್ಲೆಗಳಿಗೆ ಹೊರಡಲು ಸಿದ್ಧಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News